ಡಾ. ಶಾಂತಾ ಪುತ್ತೂರುರವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ 2025…

ಪುತ್ತೂರು: ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ. ಮತ್ತು ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಆಶ್ರಯದಲ್ಲಿ ಸೆ.14 ರಂದು ದೇರಳಕಟ್ಟೆ ನವಾಝ್ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕ ಪುತ್ತೂರಿನ ಶಿಕ್ಷಕಿ ಬೊಳುವಾರು ನಿವಾಸಿ ಡಾ. ಶಾಂತಾ ಪುತ್ತೂರುರವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ 2025 ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸೌದಿ ಅರೇಬಿಯಾದ ಉದ್ಯಮಿ ಹಾಜಿ ಮಹಮ್ಮದ್ ಕುಕ್ಕುವಳ್ಳಿ , ಮಾದಕತೆ ಮಾರಣಾಂತಿಕ ಕೃತಿಕಾರ ಕೆ.ಎಮ್. ಇಕ್ಬಾಲ್ ಬಾಳಿಲ , ಚಂದನ ಸಾಹಿತ್ಯ ವೇದಿಕೆಯ ಕವಿ ,ಸಂಘಟಕ ಭೀಮರಾವ್ ವಾಷ್ಕರ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಬೂಬಕರ್ ಅನಿಲಕಟ್ಟೆ , ಅಬ್ದುಲ್ ಅಜೀಜ್ ಜೂರಿ ಪುಣಚ , ಹಿರಿಯ ಕವಿ ಡಾ. ಸುರೇಶ್ ನೆಗಳಗುಳಿ , ಇರ್ಫಾನ್ ಕಾವು , ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮೊದಲಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ. ಶಾಂತಾ ಪುತ್ತೂರುರವರು ಭಾವೈಕ್ಯತೆ ಹಾಗೂ ಮಾದಕ ದ್ರವ್ಯ ವಿಷಯದಲ್ಲಿ ಸ್ವರಚಿತ ಚುಟುಕು ವಾಚಿಸಿದರು.