ಉಕ್ರೇನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಉಚಿತ ಆಹಾರ ಸಹಾಯವಾಣಿ…

ಮೂಡುಬಿದಿರೆ: ಪೋಲೆಂಡ್ ದೇಶದ ಗುರುದ್ವಾರದಲ್ಲಿ ಉಕ್ರೇನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಉಚಿತ ಆಹಾರ ಸಹಾಯವಾಣಿ ಬಗ್ಗೆ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಲಕ ನ್ಯೂಯಾರ್ಕ್ ಮೂಲದ ಶಿಷ್ಯ ವರ್ಗದವರು ನೊಂದ ವಿದ್ಯಾರ್ಥಿಗಳಿಗೆ ಸಹಕಾರದ ಭರವಸೆ ನೀಡಿದ್ದು, ಗುರುದ್ವಾರ ಪ್ರತಿನಿಧಿಗಳನ್ನು ಸಂಪರ್ಕಿಸಿ ಮಾ.3 ರಂದು ತಡರಾತ್ರಿ ಪೂಜ್ಯ ಮೂಡುಬಿದಿರೆ ಸ್ವಾಮೀಜಿ ಗುರುದ್ವಾರ ಕಮಿಟಿಯ ಶ್ರೀ ಜೆ ಜೆ ಸಿಂಗ್ ರವರಿಗೆ ಅಭಿನಂದನೆಗಳನ್ನು ತಿಳಿಸಿ, ಗುರುದ್ವಾರದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಈ ಸಹಾಯ ಮಾಹಿತಿ ಎಲ್ಲಾ ನೊಂದ ವಿದ್ಯಾರ್ಥಿಗಳಿಗೆ, ಹೆತ್ತವರ ಕುಟುಂಬಕ್ಕೆ ತಲುಪಿಸಲು ಅವರುಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.