ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ…

ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಅಂದಾಜು ವೆಚ್ಚ 19.43 ಲಕ್ಷದ ಕಲ್ಸಂಕ ಸೇತುವೆ, ಎಸ್ ಎಫ್ ಸಿ ಮತ್ತು ಪುರಸಭಾ ನಿಧಿ ಅನುದಾನದಡಿ ಸುಮಾರು 21ಲಕ್ಷದ ಕೃಷ್ಣಕಟ್ಟೆಯಿಂದ ಮಸೀದಿಯ ವರೆಗೆ ಚರಂಡಿ ಸಹಿತ ರಸ್ತೆ ಅಗಲೀಕರಣ ಮತ್ತು ಸ್ವರಾಜ್ ಮೈದಾನದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಸಂಪರ್ಕಿಸುವ ಸುಮಾರು 7 ಲಕ್ಷ ವರೆಗಿನ ರಸ್ತೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಲ್ಕಿ-ಮೂಡಬಿದ್ರೆ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಯಂ, ಪ್ರಮುಖರಾದ ಬಾಹುಬಲಿ ಪ್ರಸಾದ್, ಕೆ ಆರ್ ಪಂಡಿತ್, ಕೃಷ್ಣರಾಜ ಹೆಗ್ಡೆ, ಸುಕೇಶ್ ಶೆಟ್ಟಿ, ಮೇಘನಾಥ ಶೆಟ್ಟಿ, ಸುಚರಿತ ಶೆಟ್ಟಿ,ಪುರಸಭಾ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ ಪೂಜಾರಿ, ಸದಸ್ಯರುಗಳಾದ ರಾಜೇಶ್ ನಾಯ್ಕ್, ದಿವ್ಯ ಜಗದೀಶ್,ಸೌಮ್ಯ ಸಂದೀಪ್ ಶೆಟ್ಟಿ, ಸ್ವಾತಿ ಎಸ್ ಪ್ರಭು,ಶ್ವೇತಾ ಪ್ರವೀಣ್, ಧನಲಕ್ಷ್ಮಿ, ಜಯಶ್ರೀ ಕೇಶವ್, ರಾಘವ ಹೆಗ್ಡೆ, ದಿನೇಶ್ ಮಾರೂರು, ಮುಖ್ಯಾಧಿಕಾರಿ ಶ್ರೀಮತಿ ಇಂದು ,ಇಂಜಿನಿಯರ್ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.

C39b2815 09e4 4b90 8ada D37cdb66a575 300x225 Ad903c6d 2703 43cf 97dc 52c801a7e0ff 300x225 30b8b0f1 Fbea 4fb6 89e6 D99eb5dadcdf 300x225 5df1bddc A6dd 486f A5c8 545d352cbd0e 300x225 4c61fbb6 31b6 4483 A60d D2088a87cb26 300x225

Related Articles