ಕೊರೊನ ನಿಯಂತ್ರಣ ಮಾರ್ಗಸೂಚಿಗಳಿಂದಾಗಿ ಪ್ರಜೆಗಳಿಗೆ ಇನ್ನಷ್ಟು ಸಂಕಷ್ಟ – ರಿಯಾಝ್ ಕಟ್ಟೆಕ್ಕಾರ್…
ಸುಳ್ಯ: ಕೊರೊನ ನಿಯಂತ್ರಣಕ್ಕಾಗಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಮಾರ್ಗಸೂಚಿಗಳು ಜನಗಳನ್ನು ಮೂರ್ಖರನ್ನಾಗಿಸುವ ಪ್ರಯತ್ನವಾಗಿದೆ ಎಂದು ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರಕಾರದ ಈ ರೀತಿಯ ಆತುರದ ನಿರ್ಧಾರದಿಂದ ಬಡವರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಳೆದ ವರ್ಷ ವ್ಯಾಪಾರಿಗಳಿಗೆ ಉಂಟಾದ ನಷ್ಟವನ್ನು ಸರಿದೂಗಿಸುವ ಮೊದಲೇ ಸರಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಸರಕಾರ ಸಂಪೂರ್ಣ ಲಾಕ್ ಡೌನ್ ಮಾಡಲು ಅಣಿಯಾಗಿ ನಿಂತಂತಿದೆ. ನಗರ ಪ್ರದೇಶಗಳ ಮಾರ್ಗಸೂಚಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ಅನ್ವಯಿಸುವುದು ಸರಿಯಲ್ಲ. ಸರಕಾರ ಕೋವಿಡ್ ನಿಯಂತ್ರಿಸಲು ಹೆಚ್ಚೆಚ್ಚು ಕೋವಿಡ್ ಟೆಸ್ಟ್, ಕೋವಿಡ್ ವ್ಯಾಕ್ಸಿನ್ ನೀಡುವ ಬದಲು ಪ್ರಜೆಗಳನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.