ನೆತ್ತರಕೆರೆ -36ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ…

ಬಂಟ್ವಾಳ :ಪ್ರತಿಷ್ಠಿತ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ನವೋದಯ ಮಿತ್ರ ಕಲಾ ವೃಂದ (ರಿ)ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ 36ನೇ ವರ್ಷದ ವಾರ್ಷಿಕೋತ್ಸವವು ಏ.22ರಂದು ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ. ಅ ಪ್ರಯುಕ್ತ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಏ.09ರಂದು ಆದಿತ್ಯವಾರ ಬೆಳಿಗ್ಗೆ ಸಂಘದ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ನೆತ್ತರಕೆರೆ, ನವೋದಯ ಮಿತ್ರ ಕಲಾ ವೃಂದದ ಗೌರವದ್ಯಕ್ಷರಾದ ಪಿ ಸುಬ್ರಮಣ್ಯ ರಾವ್, ಅಧ್ಯಕ್ಷರಾದ ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಭಂಡಾರಿ ಅರ್ಬಿ, ಪ್ರ. ಕಾರ್ಯದರ್ಶಿ ದೀಕ್ಷಿತ್ ಬೆರ್ವ, ಕೋಶಾಧಿಕಾರಿ ಶೇಖರ್ ಕೊಡಿ,ಪ್ರಮುಖರಾದ ಭಾಸ್ಕರ ಎನ್, ಜಗದೀಶ್ ಬಂಗೇರ, ವಿಶ್ವನಾಥ ಕುಲಾಲ್, ಜಗದೀಶ್ ಎನ್,ಶ್ರೀಧರ್ ಹೆಚ್, ಲೋಕೇಶ್ ಎನ್, ಪ್ರಶಾಂತ್ ಕೆ, ದಿನೇಶ್ ಬೆರ್ವ, ರವೀಂದ್ರ, ಮೋಹನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.