ಜಿ.ಪರಮೇಶ್ವರ್ ಮನೆಯಲ್ಲಿ ಮುಂದುವರೆದ ಐಟಿ ಶೋಧ……..
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸದಾಶಿವನಗರದ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧನೆ ಮುಂದುವರೆಸಿದ್ದಾರೆ.
ತೆರಿಗೆ ವಂಚನೆ, ಸಿದ್ದಾರ್ಥ ವೈದ್ಯ ಕಾಲೇಜಿನಲ್ಲಿ ನಿಯಮಬಾಹಿರ ಸೀಟು ಹಂಚಿಕೆ ಅಥವಾ ಮಾರಾಟ ಆರೋಪ ಸಂಬಂಧ ದಾಳಿ ನಡೆದಿದ್ದು, ಆಸ್ತಿ, ವಹಿವಾಟು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಪರಮೇಶ್ವರ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ. ಗುರುವಾರ ಐಟಿ ಇಲಾಖೆ ದಾಳಿ ನಡೆಸಿದ್ದು, ಈ ವೇಳೆ ಒಟ್ಟು 4 ಕೋಟಿ 50 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಜಿ ಪರಮೇಶ್ವರ್ ನಿವಾಸದಲ್ಲಿ 70 ಲಕ್ಷ, ನೆಲಮಂಗಲದಲ್ಲಿರುವ ಪುರಸಭೆ ಸದಸ್ಯ ಶಿವಕುಮಾರ್ ಮನೆಯಲ್ಲಿ 1.80 ಕೋಟಿ ನಗದನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.