ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ರಕ್ಷಾ ಬಂಧನ ಮತ್ತು ಸಂಸ್ಕೃತ ದಿನಾಚರಣೆ…

ಬಂಟ್ವಾಳ, ಆ.9 :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಸಾಂಸ್ಕೃತಿಕ ಸಂಘ, ಸಂಸ್ಕೃತ ವಿಭಾಗದಿಂದ ರಕ್ಷಾಬಂಧನ ಹಾಗೂ ಸಂಸ್ಕೃತ ದಿನ ಜರಗಿತು.
ಬಾಳ್ತಿಲ ಗ್ರಾಮ ಪಂಚಾಯಿತಿಯ ಸುಂದರ ನಾಯ್ಕ, ಸಂಧ್ಯಾ, ಸುರೇಖಾ, ನಾಗೇಶ್, ಜ್ಯೋತಿ. ಬಿ, ಮಮತಾ ಮತ್ತು ಗೋಳ್ತಮಜಲು ಗ್ರಾಮ ಪಂಚಾಯಿತಿಯಿಂದ ಸುರೇಶ್, ವಿಜಯ ಶಂಕರ ಆಳ್ವ ಎಂ, ರೇವತಿ, ಗೀತಾಂಜಲಿ, ವನಿತಾ, ಚೈತ್ರ, ನಿಶ್ಮಿತಾ, ಜಯ ಕೆ, ಹರೀಶ್ ಎನ್ . ಅಭ್ಯಾಗತರಾಗಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಸುಜಿತ್ ಕೊಟ್ಟಾರಿ ಅತಿಥಿಗಯಾಗಿ ರಕ್ಷಾಬಂಧನ ಹಾಗೂ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಸಮಾಜದಲ್ಲಿ ಭ್ರಾತೃತ್ವದ ಭಾವನೆ, ಒಗ್ಗಟ್ಟನ್ನು ವೃದ್ಧಿಗೊಳಿಸಿ ದೇಶ ರಕ್ಷಣೆ ಚಿಂತನೆಯ ಹಬ್ಬ ರಕ್ಷಾಬಂಧನ ಎಂದರು. ಸಂಸ್ಕೃತ ಶ್ರೇಷ್ಠ ಭಾಷೆ. ಭಾಷೆಗೆ ರಾಷ್ಟ್ರ ಭಾಷೆ ಎಂಬ ಮನ್ನಣೆ ಸಿಗಬೇಕು ಎಂದು ನುಡಿದರು. ಗ್ರಾಮ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ಉಪಪ್ರಾಂಶುಪಾಲ ಯತಿರಾಜ್ ಸ್ವಾಗತಿಸಿ, ವಿದ್ಯಾರ್ಥಿನಿ ದಿವ್ಯಲಕ್ಷ್ಮೀ ವಂದಿಸಿ, ಧನು ನಿರ್ವಹಿಸಿದರು. ಶರಣ್ಯಶ್ರೀ ಗೀತೆ ಹಾಡಿದರು.