ಶುಕ್ರವಾರ – ದ.ಕ. ಜಿಲ್ಲೆಯಲ್ಲಿ ಕೊರೊನಾಗೆ 6 ಮಂದಿ ಸಾವು…
ಮಂಗಳೂರು: ಇಂದು(ಶುಕ್ರವಾರ) ರಂದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ -19 ನಿಂದ ಒಟ್ಟು 6 ಮಂದಿ ಸಾವನ್ನಪ್ಪಿದ್ದು, ದಕ್ಷಿಣ ಕನ್ನಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 36 ಕ್ಕೆ ಏರಿದೆ.
ಇಂದು ಬೆಳಿಗ್ಗೆ ಕೊರೊನ ಪೀಡಿತ ಹೊಸಬೆಟ್ಟುವಿನ 35 ವರ್ಷದ ವ್ಯಕ್ತಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾದರು. ನಂತರ ಮಂಗಳೂರಿನ ತೊಕ್ಕೊಟ್ಟುವಿನ 58 ವರ್ಷದ ಮಹಿಳೆ, ಮಂಗಳೂರಿನ ಫಳ್ನೀರ್ ನ 65 ವರ್ಷದ ವ್ಯಕ್ತಿ, ಉಳ್ಳಾಲ ಮೂಲದ 67 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಮಾಹಿತಿ ಲಭ್ಯವಾಗಿಲ್ಲ.