ಸುದ್ದಿ

ಕರ್ನಾಟಕ ಬಜೆಟ್ 2020 – ಮುಖ್ಯಾಂಶಗಳು….

ಬೆಂಗಳೂರು: 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಏಳನೇ ಬಜೆಟ್ ಮಂಡನೆ ಮಾಡಿದ್ದಾರೆ. ಅವರು ಇಂದು ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದರು.
ನೆರೆ, ಬರದಿಂದ 30 ಸಾವಿರ ಕೋಟಿ ನಷ್ಟ. ಕೇಂದ್ರದಿಂದ ಬರಬೇಕಿರುವ GST ಬಾಕಿ ಇರುವ 6500 ಕೋಟಿ ರೂ.ಗೆ ಖೋತಾ, ತೆರಿಗೆ ರೂಪದಲ್ಲಿ ಕೇಂದ್ರದಿಂದ 10 ಸಾವಿರ ಕೋಟಿಗೆ ಕೊಕ್, ರಾಜ್ಯದ ತೆರಿಗೆ ಸಂಗ್ರಹದಲ್ಲಿ 7 ಸಾವಿರ ಕೋಟಿ ಇಳಿಕೆ. ಈ ಸವಾಲುಗಳ ಮಧ್ಯೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದರು.

ರಾಜ್ಯ ಬಜೆಟ್ ನ ಮುಖ್ಯಾಂಶಗಳು ಹೀಗಿವೆ:
ಪೆಟ್ರೋಲ್-ಡಿಸೇಲ್ ಬೆಲೆಯ ಮೇಲಿನ ಶೇ.3ರಷ್ಟು ತೆರಿಗೆಯನ್ನು ಹೆಚ್ಚಿಸಿದ್ದು, ಪೆಟ್ರೋಲ್ ಬೆಲೆ 1.60 ಪೈಸೆ ಹಾಗೂ ಡೀಸೆಲ್ ಬೆಲೆ 1.59 ಪೈಸೆ ಏರಿಕೆಯಾಗಿದೆ.
ಮದ್ಯದ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಹೆಚ್ಚಳ.
ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ.
ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ.
ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್​ಗೆ ಶೇ.50ರಷ್ಟು ಹೆಚ್ಚಳ.
ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ ಮುಂದುವರಿಕೆ.
ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ ಮುಂದುವರಿಕೆ.

ಜೀವನ ಚೈತ್ರ ಯಾತ್ರೆ ಯೋಜನೆಗೆ 20 ಕೋಟಿ ಅನುದಾನ ನೀಡಲಾಗಿದೆ.
ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತನೆ
ಫ್ಲಡ್ ಇರಿಗೇಷನ್ ಪದ್ಧತಿ ಸೂಕ್ಷ್ಮ ನೀರಾವರಿಗೆ ಪರಿವರ್ತನೆ
ಆಯ್ದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮ
ಎತ್ತಿನ ಹೊಳೆ ಯೋಜನೆಗೆ 1500 ಕೋಟಿ
ಕಳಸಾ-ಬಂಡೂರಿ ಯೋಜನೆಗೆ 500 ಕೋಟಿ ರೂ.
ನವನಗರರೋತ್ಥಾನ ಯೋಜನೆ 8344 ಕೋಟಿ ರೂ. ಅನುದಾನ
ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ
ಅಟಲ್ ಭೂ ಜಲ ಯೋಜನೆಯಡಿ 1202 ಕೋಟಿ ಬಳಸಿ
ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಗೆ 1.5 ಕೋಟಿ ರೂ.ಮೀಸಲು
ಕಿಂಡಿ ಅಣೆಕಟ್ಟು ಯೋಜನೆ ವ್ಯಾಪಕ ಅನುಷ್ಠಾನಕ್ಕೆ ಪ್ಲ್ಯಾನ್
ಮನೆ ಖರೀದಿದಾರರಿಗೆ ನೋಂದಣಿ ಶುಲ್ಕದಲ್ಲಿ ಇಳಿಕೆಯಾಗಿದೆ.
ರಾಜ್ಯದ ಪ್ರತಿ ಗ್ರಾಮದಲ್ಲಿ ಜಲಗ್ರಾಮ ಕ್ಯಾಲೆಂಡರ್ ಗೆ ಕ್ರಮ
ಏತ ನೀರಾವರಿ ಯೋಜನೆಗೆ 5000 ಕೋಟಿ ರೂ. ಅನುದಾನ
ಸೂಕ್ಷ್ಮ ನೀರಾವರಿಗೆ 627 ಕೋಟಿ ರೂಪಾಯಿ ಅನುದಾನ
ಬಿಎಂಟಿಸಿಗೆ 1500 ಬಸ್ ಗಳ ಖರೀದಿಗೆ ಅನುದಾನ
ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡಲಾಗಿದೆ.
ಜೋಗ ಜಲಪಾತಕ್ಕೆ ಟೂರಿಸಂ ಸಕ್ರ್ಯೂಟ್ ಯೋಜನೆ ರೂಪಿಸಲಾಗುವುದು.
ಮೃಗಾಲಯ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲು
ಕೃಷಿಗೆ ಶೇ.9.5 ರಷ್ಟು ಅನುದಾನ ಮೀಸಲಿಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 2600 ಕೋಟಿ ರೂ.
ರೈತರ ಮನೆ ಬಾಗಿಲಿಗೆ ಕೀಟ ನಾಶಕ
ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಸ್ಥಾಪನೆ
ಸಾವಯವ ಕೃಷಿಗೆ 200 ಕೋಟಿ ರೂ. ಅನುದಾನ
ಹಾಪ್ ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ಕ್ರಮ
ರೈತ ಸಿರಿ ಯೋಜನೆಯಡಿ ಟೆಫ್. ಚೊಯಾ, ಕ್ವಿನೋವಾ ಸೇರ್ಪಡೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮರು ಘೋಷಣೆ
ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ರೂ. ಕೋಟಿ
ಬಾಧಿತ 6.45 ರೈತರಿಗೆ ಪರಿಹಾರದ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆಯಾಗಲಿದೆ.
ಕಟ್ಟಡ ಕಾರ್ಮಿಕರಿಗಾಗಿ 10 ಮೊಬೈಲ್ ಕ್ಲಿನಿಕ್ ಗಳ ಆರಂಭವಾಗಲಿದೆ.
ಕಾರ್ಮಿಕರಿಗೆ ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್‍ಗಳು ವಿತರಣೆಯಾಗಲಿದೆ. ಇದರಿಂದ ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಿದೆ.
ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ.
ಗಾರ್ಮೆಂಟ್ ನ ಮಹಿಳಾ ಕಾರ್ಮಿಕರಿಗೆ ‘ವನಿತಾ ಸಂಗಾತಿ’ ಯೋಜನೆ.
ನೌಕರರು ಮತ್ತು ಆವಲಂಬಿಗರಿಗೆ ನಗದು ರಹಿತ ಶಸ್ತ್ರ ಚಿಕಿತ್ಸೆಗಾಗಿ ಅಂದಾಜು ವಾರ್ಷಿಕ 50 ಕೋಟಿ ರೂ. ಅನುದಾನ ನೀಡಲಾಗಿದೆ. 22.5 ಲಕ್ಷ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತರಿಗೆ ಅನುಕೂಲವಾಗಲಿದೆ.
ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 60 ಲಕ್ಷ ಮೀಸಲಿಡಲಾಗಿದೆ.
ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಹಾಗೂ ಭಾಗ್ಯಲಕ್ಷ್ಮೀ ಯೋಜನೆ ಮುಂದುವರಿಸಲಾಗಿದೆ.

Advertisement

Related Articles

Leave a Reply

Your email address will not be published. Required fields are marked *

Back to top button