ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ – ವಿಶ್ವ ಹಾವು ದಿನಾಚರಣೆ…

ಸುಳ್ಯ: ವಿಶ್ವ ಹಾವುಗಳ ದಿನಾಚರಣೆಯ ಪ್ರಯುಕ್ತ ಪರಿಸರ ಹಾಗೂ ವಿವಿಧ ರೀತಿಯ ಉರಗಗಳ ಸಂರಕ್ಷಣೆಯ ಕುರಿತು ಮಾಹಿತಿ ಕಾರ್ಯಗಾರ ಕೆವಿಜಿ ಆಯುರ್ವೇದ ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ಜು.16 ರಂದು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅರಣ್ಯ ಸಂರಕ್ಷಣಕಾರರಾದ ಶ್ರೀ ಭುವನೇಶ್ ಕೈಕಂಬ ಇವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಪ್ರಕೃತಿಯ ಸಮತೋಲನದಲ್ಲಿ ಉರಗಗಳ ಮಹತ್ವ, ವಿವಿಧ ಉರಗಗಳ ಪರಿಚಯ ಹಾಗೂ ಅದರ ಸಂರಕ್ಷಣೆಯ ಮಹತ್ವದ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗ ಮುಖ್ಯಸ್ಥರಾದ ಡಾ. ಅಶೋಕ್ ಕೆ. ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತ ಎಂ, ಅಗದ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಅವಿನಾಶ್ ಕೆ. ವಿ., ಪ್ರಾಧ್ಯಾಪಕರಾದ ಡಾ. ಯು. ಸಂತೋಷ್ ನಾಯಕ್, ಸಹ ಪ್ರಾಧ್ಯಾಪಕರಾದ ಡಾ. ಪೂಜಾ ಕೆ. ಎಸ್., ಡಾ. ಧನ್ಯಾಶ್ರೀ ಯು.ಬಿ., ಉಪಸ್ಥಿತರಿದ್ದರು.
ಡಾ. ಅವಿನಾಶ್ ಕೆ. ವಿ. ಸ್ವಾಗತಿಸಿ, ಕುಮಾರಿ ಜ್ಯೋತಿ ಮತ್ತು ಬಳಗದವರು ಪ್ರಾರ್ಥಿಸಿ, ಕುಮಾರಿ ರಾಧಾ ಪವಾರ್ ಹಾಗೂ ಗಾನವಿ ಕೆ ಪಿ ಕಾರ್ಯಕ್ರಮ ನಿರೂಪಿಸಿದರು, ಅಗದ ತಂತ್ರ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಪೂಜಾ ಕೆ ಎಸ್. ಇವರು ವಂದಿಸಿದರು.