ಕೊರೊನಾಕ್ಕೆ ಆಯುರ್ವೇದ ಔಷಧ – ಡಾ. ಗಿರಿಧರ ಕಜೆ ಅವರಿಂದ ಸರ್ಕಾರಕ್ಕೆ ವರದಿ ….

ಬೆಂಗಳೂರು: ಭಾರತ ಪಾರಂಪರಿಕ ಆಯುರ್ವೇದ ಔಷಧ ನೀಡಿ ಕರೊನಾ ಸೋಂಕು ಗುಣಪಡಿಸುವ ಕುರಿತು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು, 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಹೊಂದಿರುವುದಾಗಿ ತಿಳಿಸಿರುವ ಡಾ.ಕಜೆ, ಡೆಂಗ್ಯು, ಚಿಕನ್ ಗುನ್ಯಾ, ಹೆಚ್1 ಎನ್ 1 ಸೇರಿದಂತೆ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧ ಮಾತ್ರದಿಂದ ಸಹಸ್ರಾರು ರೋಗಿಗಳನ್ನು ಗುಣಪಡಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿದ್ದು, ಆಯುರ್ವೇದ ಪದ್ಧತಿಯ ಆಧಾರದಲ್ಲಿ ನಾನು ಸಂಶೋಧಿಸಿರುವ ‘ಭೌಮ್ಯ’ ಸಾಥ್ಮ್ಯ’ ಎಂಬ ಔಷಧಗಳು ‘ಕೋವಿಡ್ 19’ ಅನ್ನು ಗುಣಪಡಿಸಲು ಶಕ್ತವಾಗಿವೆ ಎಂದು ಡಾ.ಕಜೆ ಹೇಳಿದ್ದಾರೆ. ಇವು ವೈರಾಣುನಾಶಕ ಗುಣಮಾತ್ರವನ್ನು ಹೊಂದಿರದೆ ಜ್ವರ, ಸೀನು, ಉಸಿರಾಟದ ತೊಂದರೆ ಗುಣಪಡಿಸುತ್ತವೆ. ಯಕೃತ್ ಗೆ ಬಲ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ 32 ಸಂಶೋಧನೆಗಳ 239 ಪುಟಗಳ ದಾಖಲೆಗಳನ್ನೂ ನೀಡಿದ್ದಾರೆ.

ಭಾರತದಲ್ಲಿ ಇರುವ 5,000+ ಪಾಸಿಟಿವ್ ರೋಗಿಗಳಿಗೆ ಹಾಗೂ ಕ್ಲಿನಿಕಲ್ ಅಧ್ಯಯನಕ್ಕೆ ಈ ಔಷಧವನ್ನು ಉಚಿತವಾಗಿ ಕೊಡಲು ಸಿದ್ಧನಿದ್ದೇನೆ. ಅಂತೆಯೇ ನಾನು ಸಂಶೋಧಿಸಿರುವ ‘ಭೌಮ್ಯ’ ಹಾಗೂ ‘ಸಾಥ್ಮ್ಯ’ ಮಾತ್ರೆಗಳ ಫಾರ್ಮುಲಾ ಹಾಗೂ ಸ್ವಾಮ್ಯವನ್ನು ಕೊವಿಡ್ 19 ವಿರುದ್ಧ ಹೋರಾಡಲು ಹಾಗೂ ಜೀವಜಗತ್ತಿನ ಒಳಿತಿಗಾಗಿ ಕೇಂದ್ರ ಸರ್ಕಾರಕ್ಕೆ ನೀಡಲು ಬದ್ಧನಾಗಿದ್ದೇನೆ ಎಂದು ತಮ್ಮ ಪತ್ರದಲ್ಲಿ ಡಾ. ಗಿರಿಧರ್ ಕಜೆ ಉಲ್ಲೇಖಿಸಿದ್ದಾರೆ.
ಮಹಾಮಾರಿ ಕೊರೊನಾವನ್ನು ಆಯುರ್ವೇದಿಕ್ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಇದನ್ನು ಗುಣಪಡಿಸಬಲ್ಲೆ ಎಂದು ದಾಖಲೆಗಳ ಸಮೇತ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button