ಉಚಿತ ಕಣ್ಣಿನ ಹಾಗೂ ದಂತ ತಪಾಸಣೆ ಶಿಬಿರ…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ಬಂಟ್ವಾಳ ತಾಲೂಕು, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ನರಿಕೊಂಬು ಎ, ನರಿಕೊಂಬು ಬಿ, ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ, ರೋಟರಿ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಎ ಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ “ಉಚಿತ ಕಣ್ಣಿನ ಹಾಗೂ ದಂತ ತಪಾಸಣೆ ಶಿಬಿರ” ಸರಕಾರಿ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ನಡೆಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿ ಸಿ ರೋಡ್ ಇದರ ಅಧ್ಯಕ್ಷರಾದ ಪ್ರೊಫೆಸರ್ ತುಕರಾಮ ಪೂಜಾರಿ ಈಗ ನಮ್ಮಲ್ಲಿ ಎಲ್ಲವೂ ಇದೆ ಆದರೆ ಸಂಸ್ಕಾರದ ಕೊರತೆ ಇದೆ. ಇಂತಹ ಉಚಿತ ಶಿಬಿರಗಳ ಜೊತೆಗೆ ಸಂಸ್ಕಾರ ಕಲಿಸುವಂತಹ ಶಿಬಿರಗಳನ್ನು ಆಯೋಜಿಸುವ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯದ ವಲಯ ಅಧ್ಯಕ್ಷರಾದ ಶ್ರೀಮತಿ ಲೀಡಿಯೋ ಪಿಂಟೋ ವಹಿಸಿದ್ದರು .
ಕಾರ್ಯಕ್ರಮದ ವೇದಿಕೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನೀತ ಪುರುಷೋತ್ತಮ್, ಎ ಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆಯ ಡಾಕ್ಟರ್ ಶಿಲ್ಪಾ,ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಅಂಚನ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಹೆಗ್ಡೆ, ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಇದರ ಆಡಳಿತ ಟ್ರಸ್ಟಿ ಶ್ರೀಯುತ ಕೆ ಕೃಷ್ಣಕುಮಾರ್ ಪೂಂಜ, ಪ್ರಗತಿಪರ ಕೃಷಿಕರಾದ ಪ್ರೇಮನಾಥ ಶೆಟ್ಟಿ ಅಂತರ ಮೊದಲಾದವರು ಉಪಸ್ಥಿತರಿದ್ದರು.
ನರಿ ಕೊಂಬು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಪ್ರಾರ್ಥಿಸಿ ,ನರಿಕೊಂಬು ಏ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿ , ಸೇವಾ ಪ್ರತಿನಿಧಿ ಕುಸುಮಾವತಿ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಶ್ರೀಮತಿ ಮಮತಾ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು. ನರಿಕೊಂಬು ಬಿ ಒಕ್ಕೂಟ ಅಧ್ಯಕ್ಷ ಜಯಂತ್ , ಸೇವಾ ಪ್ರತಿನಿಧಿ ಪ್ರತಿಭಾ, ಸೇವಕೇಂದ್ರದ ವಿ ಎಲ್ ಇ ದೀಪಿಕಾ ಸಹಕರಿಸಿದರು.