ಗೋಳ್ತಮಜಲು ಗ್ರಾಮದ ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್- 32 ನೇ ವರ್ಷದ ಶ್ರೀ ಗಣೇಶೊತ್ಸವ…

ಬಂಟ್ವಾಳ: ಗೋಳ್ತಮಜಲು ಗ್ರಾಮದ ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್ (ರಿ), ಗಣೇಶ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ ಉತ್ಸವ ಸಮಿತಿ ,ಮಹಿಳಾ ಸಮಿತಿ ಸಹಕಾರದೊಂದಿಗೆ 32 ನೇ ವರ್ಷದ ಶ್ರೀ ಗಣೇಶೊತ್ಸವ ಹಾಗೂ ಗಣೇಶ ಮಂದಿರದ 14 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಬೆಳಿಗ್ಗೆ ವಿಗ್ರಹ ಪ್ರತಿಷ್ಠೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವು ಮಂದಿರದ ಗೌರವಾಧ್ಯಕ್ಷರಾದ ಶ್ಯಾಮ್ ಭಟ್ ಜಿ.ತೋಟ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಧಾರ್ಮಿಕ ಉಪನ್ಯಾಸಗೈದ ನೀರಪಾದೆ ಶಾಲೆಯ ಶಾರೀರಿಕ ಶಿಕ್ಷಕರಾದ ಜಗದೀಶ್ ಕಲ್ಲಡ್ಕ ಅದೆಷ್ಟೋ ಪರಕೀಯರ ದಾಳಿಯ ನಂತರ ಭಾರತ ತನ್ನತನವನ್ನು ಉಳಿಸಿತ್ತು. ಆದರೆ ಇಂದು ನಮ್ಮದೇ ಆದ ತಪ್ಪಿನಿಂದ ನಮ್ಮ ಸಂಸ್ಕ್ರತಿಯು ಅದಃಪತನಗೊಳ್ಳುತ್ತಿದೆ. ಪ್ರಕೃತಿಯ ಜೊತೆ ಚೆಲ್ಲಾಟವಾಡದೆ ಅದರ ಜೊತೆ ಬದುಕೋಣ. ನಮ್ಮ ಸಂಸ್ಕ್ರತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಿಳಿಸೋಣ ಎಂದರು. ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ ಸ್ಪರ್ಧಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ವೇದಿಕೆಯಲ್ಲಿ ಮಂದಿರದ ಅದ್ಯಕ್ಷ ಗೋಪಾಲಕೃಷ್ಣ ಭಟ್, ಹಿರಿಯರಾದ ಶ್ರಿ ಸುಂದರ ಆಳ್ವ ಗೋಳ್ತಮಜಲುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷರಾದ ತಿಲಕ್ ರಾಜ್ ಹೊಸೈಮಾರ್,ಮಹಿಳಾ ಸಮಿತಿಯ ಅಧ್ಯಕ್ಷೆ ನಳಿನಿ ಡೊಂಬಯ್ಯ ಪೂಜಾರಿ ಉಪಸ್ಥಿತರಿದ್ದರು. ಶರಣ್ಯ ಜಿ ಆಚಾರ್ಯ ಗಣೇಶ್ ಕೋಡಿ ಪ್ರಾರ್ಥಿಸಿ, ಕಾರ್ಯದರ್ಶಿ ಚಂದ್ರಶೇಖರ್ ಟೈಲರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೋನಪ್ಪ ಜಿ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಶ್ರಿ ಮೋನಪ್ಪ ದೇವಸ್ಯ ವಂದಿಸಿ, ರವೀಶ್ ಆಚಾರ್ಯ ಗಣೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು ವಿಶೇಷ ಕುಣಿತ ಭಜನೆತಂಡಗಳ ಮೂಲಕ ಶ್ರೀ ಗಣೇಶ ಮೂರ್ತಿಯ ಶೋಭಯಾತ್ರೆ ಮಾಡಿ ಜಲ ಸ್ಥoಭನ ಮಾಡಲಾಯಿತು.

whatsapp image 2023 09 20 at 3.51.46 pm
whatsapp image 2023 09 20 at 3.51.45 pm
whatsapp image 2023 09 20 at 3.51.46 pm (2)
Sponsors

Related Articles

Back to top button