ಗೂನಡ್ಕ – ಪೇರಡ್ಕ ಉರೂಸ್ ಸಂಪನ್ನ, ಸಾವಿರಾರು ಮಂದಿ ಭಾಗಿ…
ಸುಳ್ಯ: ಗೂನಡ್ಕ – ಪೇರಡ್ಕ ವಲಯುಲ್ಲಾಯಿ ದರ್ಗಾ ಶರೀಫಿನ ಉರೂಸ್ ಸಮಾರಭವು ಅದ್ಧೂರಿ ಯಾಗಿ ಸಂಪನ್ನಗೊಂಡಿತು.
ಫೆ 19 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಾಗ್ಮಿ ಬಹು| ನೌಷದ್ ಭಾಖವಿ ತಿರುವಂತಾಪುರ ರವರು ಧಾರ್ಮಿಕ ಉಪನ್ಯಾಸವನ್ನು ನೀಡಿ ಹೆಣ್ಣು ಮಕ್ಕಳು ಮನೆಯಲ್ಲಿರುವುದೆ ಭಾಗ್ಯವಾಗಿದೆ. ಹೆಣ್ಣು ಮಗು ಹುಟ್ಟಿದರೆ ಅಪಹಾಸ್ಯ ಸಲ್ಲದು ಪೋಷಕರು ಅವರಿಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ನೀಡಿ ಬೆಳೆಸಬೇಕೆಂದರು.
ಸಮಾರಭದ ಉದ್ಘಾಟನೆಯನ್ನು ಬಹು| ಸೈಯದ್ ಝೈನುಲ್ ಅಬಿದೀನ್ ತಂಗಳ್ ದುಗ್ಗಲಡ್ಕ ನೆರವೇರಿಸಿ ಪೇರಡ್ಕದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರನ್ನು ವರ್ಷಕೊಮ್ಮೆ ನಡೆಯುವ ಉರೂಸಿನಲ್ಲಿ ಭಾಗಿಯಾಗಿ ಪುಣ್ಯ ಕಟ್ಟಿಕೊಳ್ಳಬೇಕು. ಇಲ್ಲ್ಲಿ ನೀಡುವ ಪ್ರಸಾದ ಪವಿತ್ರವಾಗಿದೆ ಭಕ್ತಿಯಿಂದ ಸ್ವೀಕರಿಸಬೇಕೆಂದರು.
ಅಧ್ಯಕ್ಷತೆಯನ್ನು ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷರು ಹಾಗೂ ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ದುವಾವನ್ನು ಸ್ಥಳಿಯ ಖತೀಬರಾದ ಬಹು| ರಿಯಾಝ್ ಫೈಝಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಲ್ಲುಗುಂಡಿ ಜುಮಾ ಮಸೀದಿಯ ಖತೀಬರಾದ ನಈಮ್ ಫೈಝಿ, ಬೆಂಗಳೂರು ಪಾರ್ವಡ್ ಗೂಫ್ ನ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ,ಜನರಲ್ ಮ್ಯಾನೇಜರ್ ಪಿ ಎಂ ಹಾರಿಸ್ ತೆಕ್ಕಿಲ್,ಸುಳ್ಯ ಗಾಂಧಿನಗರ ಎಂ.ಜೆ.ಎಂ ಅಧ್ಯಕ್ಷ ಕೆ.ಎಂ ಮುಸ್ತಫ, ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್. ಸಂಶುದ್ದೀನ್ ಶಂಶುಲ್ ಉಲಾಮ ಟ್ರಸ್ಟ್ ಬೆಳ್ಳಾರೆ ಅಧ್ಯಕ್ಷ ಅಬೂಬಕ್ಕರ್ ಮಂಗಳ, ದ.ಕ ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್ ಕೋಶಾಧಿಕಾರಿ ಅಬ್ದುಲ್ ಖಾದರ್ ಬಾಯಂಬಾಡಿ, ಕೆಫೆಕ್ ಮಾಜಿ ಸದಸ್ಯ ಪಿ.ಎ ಮಹಮ್ಮದ್ ಗುತ್ತಿಗೆದಾರ ಎಚ್.ಎ ಅಶ್ರಫ್ ಬಾಲೆಂಬಿ, ಪುತ್ತೂರು ಪುರ ಸಭಾ ಸದಸ್ಯ ರಿಯಾಜ್, ಹಮೀರ್ ಹಾಜಿ ಸುಳ್ಯ, ಮೊದಲಾದವರು ಭಾಗವಹಿಸಿದರು.
ವೇದಿಕೆ ಯಲ್ಲಿ ಜುಮಾಅತ್ ಅಧ್ಯಕ್ಷ ಆಲಿ ಹಾಜಿ,ಮಾಜಿ ಅಧ್ಯಕ್ಷರಾದ ಟಿ ಎಂ ಬಾಬ ಹಾಜಿ ತೆಕ್ಕಿಲ್,ಟಿ ಇ ಆರೀಫ್ ತೆಕ್ಕಿಲ್,ಮದರಸ ಅಧ್ಯಾಪಕ ಹಂಸ ಮುಸ್ಲಿಯಾರ್, ಸಹ ಅಧ್ಯಾಪಕ ನೂರುದ್ಧೀನ್ ಅನ್ಸಾರಿ, ಅಬ್ಬಾಸ್ ಪಾಂಡಿ, ಅಕ್ಬರ್ ಕರಾವಳಿ, ಎಸ್.ಕೆ.ಎಸ್.ಎಸ್.ಎಪ್, ಗೂನಡ್ಕ ಶಾಖೆ ಅಧ್ಯಕ್ಷ ಸಾಜಿದ್ ಅಝ್ ಹರಿ, ಜುಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಗೂನಡ್ಕ, ಮೊದಲಾದವರು ಉಪಸ್ಥಿತರಿದ್ದರು. ಉರೂಸ್ ಸಮಿತಿಯ ಕಾರ್ಯದರ್ಶಿ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂಧಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಮಾಡಲಾಯಿತು. ಮೂರು ದಿವಸಗಳ ಕಾಲ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು.