ಕೋಟಿ ಗೀತಾ ಲೇಖನ ಯಜ್ಞ – ಡಾ | ಡಿ . ವೀರೇಂದ್ರ ಹೆಗ್ಗಡೆ ಯವರಿಂದ ಮೆಚ್ಚುಗೆ,ಮಾರ್ಗದರ್ಶನ…

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ | ಡಿ . ವೀರೇಂದ್ರ ಹೆಗ್ಗಡೆ ಅವರಿಗೆ ಕೋಟಿ ಗೀತಾ ಲೇಖನ ಯಜ್ಞ ದ ಪುಸ್ತಕಗಳನ್ನು ನೀಡಿ ಮಾರ್ಗದರ್ಶನ ಕೋರಲಾಯಿತು.
ರಾಜ್ಯ ಸಭಾ ಸದಸ್ಯರು ಆಗಿರುವ ಖಾವಂದರು ಶ್ರೀ ಪುತ್ತಿಗೆ ಶ್ರೀ ಪಾದರ ಈ ಜಾಗತಿಕ ಧಾರ್ಮಿಕ ಸಂಕಲ್ಪ ಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಶ್ರೀ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ , ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ. ಗೋಪಾಲ ಆಚಾರ್ಯ, ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಕೆ. ವಿ. ರಮಣ ಆಚಾರ್ಯ, ಅಂತರ್ಯಾಮಿ ಯ ನಂದನ್ ದಳವಾಯಿ ಉಪಸ್ಥಿತರಿದ್ದರು.
