ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಪುಣ್ಯ ಸ್ಮರಣೆ…

ಸುಳ್ಯ: ಸ್ವತoತ್ರ ಭಾರತದ ಪ್ರಥಮ ಪ್ರಧಾನಿ ಚಾಚಾ ಜವಾಹರ್ ಲಾಲ್ ನೆಹರೂ ರವರ ಪುಣ್ಯ ತಿಥಿ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುಣ್ಯ ಸ್ಮರಣೆ ಕಾರ್ಯಕ್ರಮ ಜರಗಿತು.
ಅಧ್ಯಕ್ಷತೆಯನ್ನು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್ ವಹಿಸಿದ್ದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಅನುಸ್ಮರಣೆ ಮಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಭೂ ನ್ಯಾಯ ಮಂಡಳಿ ಸದಸ್ಯ ಅಡ್ವೋಕೇಟ್ ಪವಾಜ್ ಕನಕಮಜಲು, ಮುಖಂಡರುಗಳಾದ ಅಡ್ವೋಕೇಟ್ ದಿನೇಶ್ ಅಂಬೆಕಲ್ಲು, ಭೋಜಪ್ಪ ನಾಯ್ಕ್ ಅಡ್ಕಾರು,ಗಂಗಾಧರ್ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.