ಬಂಟ್ವಾಳ ಗಾಣಿಗರ ಸೇವಾ ಸಂಘ -ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ…
ಪ್ರಧಾನಿ ಮೋದಿ ಹಾದಿ ಎಲ್ಲರಿಗೂ ಮಾದರಿ: ಸಂಸದ ಬ್ರಿಜೇಶ್ ಚೌಟ...

ಬಂಟ್ವಾಳ: ದೇಶದಲ್ಲಿ ಕಳೆದ 11 ವರ್ಷಗಳಿಂದ ಪ್ರಧಾನಿಯಾಗಿ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಗೌರವ ತಂದು ಬಲಿಷ್ಠ ರಾಷ್ಟ್ರವ್ವನ್ನಾಗಿಸಲು ಅವಿರತ ಶ್ರಮಿಸುತ್ತಿರುವ ಗಾಣಿಗ ಸಮಾಜದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ಕೊಟ್ಟ ಹಾದಿ ಸಮಸ್ತ ಜನತೆಗೆ ಮಾದರಿಯಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣ ದಲ್ಲಿ ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಆಧುನಿಕ ಯುಗದಲ್ಲಿ ಗಾಣಿಗ ಸಮುದಾಯವು ಕುಲಕಸುಬು ಯಾಂತ್ರಿಕರಣ ಗೊಳಿಸಿ ಹೊಸ ರೂಪ ನೀಡಲು ಮುಂದಾದರೆ ನೆರವು ನೀಡುವುದಾಗಿ ಭರವಸೆ ನೀಡಿದರು.’
ಮಾಜಿ ಸಚಿವ ಬಿ. ರಮಾನಾಥ ರೈ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ,
‘ ಗಾಣಿಗರು ಯಾಂತ್ರಿಕ ಉದ್ದಿಮೆ ಆರಂಭಿಸಿದಾಗ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದರು.
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ. ದುರ್ಗಾಪ್ರಸಾದ್ ನಿಟ್ಟೆ ಶೈಕ್ಷಣಿಕ ಉಪನ್ಯಾಸ ನೀಡಿದರು.
ಬಾರ್ಕೂರು ಶ್ರೀ ವೇಣುಗೋಪಾಲ ದೇವಸ್ಥಾನ ಆಡಳಿತ ಮೊಕ್ತೇಸರ ಉದಯ ಕುಮಾರ್, ಮಂಗಳೂರು ಕರಾವಳಿ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ತೇಜಪಾಲ್, ಅಧ್ಯಕ್ಷ ಎ. ಎಸ್. ವೆಂಕಟೇಶ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಮಾಧವ ಎಸ್. ಮಾವೆ, ಉದ್ಯಮಿ ರಾಮಕೃಷ್ಣ ಬಾರ್ಕೂರು, ಜಿಲ್ಲಾ ಗಾಣಿಗ ಸಂಘದ ಉಪಾಧ್ಯಕ್ಷ ರಮೇಶ್ ಮೆಂಡನ್ ಶುಭ ಹಾರೈಸಿದರು.
ಪಂಜಿಕಲ್ಲು ಗ್ರಾ. ಪಂ. ಅಧ್ಯಕ್ಷೆ ನಳಿನಿ ಪ್ರಸಾದ್, ಬರಿಮಾರು ಗ್ರಾ. ಪಂ. ಅಧ್ಯಕ್ಷ ಸದಾಶಿವ ಬರಿಮಾರು, ಕೆದಿಲ ಗ್ರಾ. ಪಂ. ಅಧ್ಯಕ್ಷ ಹರೀಶ್ ವಿ. ಪಾಲ್ತಾಜೆ, ಬಾಳ್ತಿಲ ಗ್ರಾ ಪಂ. ಉಪಾಧ್ಯಕ್ಷೆ ರಂಜಿನಿ, ಇಡ್ಕಿದು ಗ್ರಾ. ಪಂ. ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ಪ್ರಮುಖರಾದ ಅನಿಲ್ ಕುಮಾರ್ ಅತ್ತಾವರ, ಎಂಜಿನಿಯರ್ ಸಂತೋಷ್ ಮಣಿಹಳ್ಳ, ವಿಕ್ರಮ್ ಗಾಣಿಗ ಸಜಿಪ, ನರ್ಸಪ್ಪ ಅಮೀನ್, ಭುವನೇಶ್ ಮೊಗರ್ನಾಡು, ಸಚಿನ್ ಮೆಲ್ಕಾರ್, ನಿತ್ಯಾನಂದ ಸಪಲ್ಯ, ವೇದವ ಗಾಣಿಗ ಮತ್ತಿತರರು ಇದ್ದರು.
ಇದೇ ವೇಳೆ ಸಾಧಕ ವಿದ್ಯಾರ್ಥಿಗಳು ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟರ್ ಆದರ್ಶ್ ಭರತ್ ಗಾಣಿಗ ಅತ್ತಾವರ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ವಸಂತ್ ಪಿ. ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.