ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಮನೆ ದುರಸ್ಥಿಗೆ ಧನ ಸಹಾಯ…

ಸುಳ್ಯ: ಕೋರೋನ ಸಂಕಷ್ಟ ಕಾಲದಲ್ಲಿ ಮಳೆಯಿಂದ ಹಾನಿಯಾದ ದಿವಂಗತ ಇಬ್ರಾಹಿಂ ಕಡೆಪಾಲ ಅವರ ಮನೆಗೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ರವರು ಸಂದರ್ಶಿಸಿ ಅವರಿಗೆ ಮನೆ ದುರಸ್ಥಿ ಮಾಡಲು ಧನ ಸಹಾಯ ನೀಡಿದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ತಾಜ್ ಮಹಮ್ಮದ್ ಹಾಗೂ ಕೆ ಎಂ ರಫೀಕ್ ಪ್ರಗತಿ, ರಫೀಕ್ ಕರಾವಳಿ,ಸಿದ್ದಿಕ್ ಕಡೆಪಾಲ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್ಕೆ ಹನೀಫ್ ಜೊತೆಗಿದ್ದರು.