ದ.ಕ – ಇಂದು ಲಭ್ಯವಾದ ಎಲ್ಲಾ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್…

ಮಂಗಳೂರು: ಜಿಲ್ಲೆಯಲ್ಲಿ ಬುಧವಾರದಂದು ಲಭ್ಯವಾದ ಎಲ್ಲಾ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ.
ಇಂದು 390 ಮಂದಿಯ ಕೊರೊನಾ ಪರೀಕ್ಷಾ ವರದಿಗಳು ಲಭ್ಯವಾಗಿದ್ದು, ಎಲ್ಲಾ ವರದಿಗಳು ನೆಗೆಟಿವ್ ಆಗಿದೆ.
ನಿನ್ನೆ ಕೂಡಾ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದ್ದವು. ಇಂದು 248 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನು ಬಂಟ್ವಾಳದ ಕಸಬ ನಿವಾಸಿ ಕೊರೊನಾ ಸೋಂಕಿತ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಮಹಿಳೆಗೆ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಕಾಸರಗೋಡಿನಲ್ಲಿ ಖಾಸಗಿ ಚಾನಲ್‌ವೊಂದರ ವರದಿಗಾರ ಸೇರಿದಂತೆ ಇಬ್ಬರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.