ಕೆಸಿಎಫ್ ಮಸ್ಕತ್ ಝೋನ್ ಇಶ್ಕೇ ರಸೂಲ್ ﷺ ಮೀಲಾದ್ ಕಾನ್ಫರೆನ್ಸ್…

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಮಸ್ಕತ್ ಝೋನ್ ವತಿಯಿಂದ ಇಶ್ಕೇ ರಸೂಲ್ ﷺ ಮೀಲಾದ್ ಕಾನ್ಫರೆನ್ಸ್ ಅ. 29 ಶುಕ್ರವಾರದಂದು ರಾತ್ರಿ ಹಾಜಿ ಇಬ್ರಾಹಿಂ ಅತ್ರಾಡಿರವರ ನಿವಾಸದಲ್ಲಿ ಹಾಗೂ ಝೂಮ್, ಯೂ ಟ್ಯೂಬ್ ಆನ್ಲೈನ್ ನಲ್ಲಿ ಕೆಸಿಎಫ್ ಮಸ್ಕತ್ ಝೋನ್ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಮರಕಡ ಇವರ ಅಧ್ಯಕತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಕೆಸಿಎಫ್ ಒಮಾನ್ ಶಿಕ್ಷಣ ಸಮಿತಿ ಅಧ್ಯಕ್ಷರು ಬಹು| ಉಬೈದುಲ್ಲಾಹ್ ಸಖಾಫಿ ಇವರು ದುಅ ನೆರವೇರಿಸಿ ಕೆಸಿಎಫ್ ಮಸ್ಕತ್ ಝೋನ್ ಪ್ರಧಾನ ಕಾರ್ಯದರ್ಶಿ ಜನಾಬ್ ಹಾರಿಸ್ ಕೊಳಕೇರಿ ಸಭಿಕರನ್ನು ಸ್ವಾಗತಿಸಿದರು. ಬಹು ಉಬೈದುಲ್ಲಾಹ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪುಟಾಣಿ ಮಕ್ಕಳ ಪ್ರವಾದಿ (ಸ.ಅ) ರ ಪ್ರಕೀರ್ತನೆಗಳ ಮೂಲಕ ತೊಡಗಿದ ಕಾರ್ಯಕ್ರಮವು ಮೀಲಾದ್ ಕಾನ್ಫರೆನ್ಸ್ ಗೆ ಮೆರುಗು ತಂದು ಕೊಟ್ಟಿತು, ಮೌಲೂದ್ ಪಾರಾಯಣ ಮಾಡಿ ಇಂಪಾದ ಬುರ್ದಾ ಮಜ್ಲಿಸ್ ಹಾಗೂ ಅಶ್ರಕ ಬೈತ್ ಮಜ್ಲಿಸ್ ಗೆ ಐಸಿಎಫ್ ಒಮಾನ್ ಸಮಿತಿ ಉಸ್ತಾದರುಗಳಾದ ಬಹು| ಅನಸ್ ಜವ್ಹರಿ ಬಹು| ಅಜ್ಮಲ್ ಜವ್ಹರಿ ಉಸ್ತಾದರು ನೇತೃತ್ವ ನೀಡಿ ಭಕ್ತಿಯಿಂದ ದುಆ ನೆರವೇರಿಸಿ ಕೊಟ್ಟರು, ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರು ಜನಾಬ್ ಅಯ್ಯುಬ್ ಕೋಡಿ ರವರು ಸಭಿಕರನ್ನು ಅಭಿನಂದಿಸಿ ಹಿತವಚನಗಳನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕ್ಯಾಬಿನೆಟ್ ಸದಸ್ಯರುಗಳಾದ ಬಹು| ಸಯ್ಯದ್ ಆಬಿದ್ ಅಲ್ ಹೈದ್ರೂಸಿ ತಂಗಳ್ ರವರು, ಜನಾಬ್ ಆರಿಫ್ ಕೋಡಿ, ಜನಾಬ್ ಸ್ವಾದಿಕ್ ಹಾಜಿ ಸುಳ್ಯ, ಜನಾಬ್ ಹಂಝ ಹಾಜಿ ಕಣ್ಣಂಗಾರ್ ಹಾಗೂ ಹಿರಿಯ ನೇತಾರರಾದ ಜನಾಬ್ ಇಬ್ರಾಹಿಂ ಹಾಜಿ ಆತ್ರಾಡಿ ರವರು ಉಪಸ್ಥಿತರಿದ್ದರು.

ಸಯ್ಯದ್ ಮಾಝಿನ್ ಸ್ವಲಾತ್ ಕಮಿಟಿ ಕುರುಮ್ ಒಮಾನ್ ಇದರ ಅಧ್ಯಕ್ಷರು ಜನಾಬ್ ಅಬ್ದುಲ್ ಅಝೀಝ್ ಆಮ್ವಾಜ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರವಾದಿ (ಸ.ಅ) ಪ್ರಕೀರ್ತನೆಗಳನ್ನು ಹಾಡಿದ ಪುಟಾಣಿಗಳಿಗೆ ಝೋನ್ ಪರವಾಗಿ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಯಿತು.

ಮಸ್ಕತ್ ಝೋನ್ ಕೋಶಾಧಿಕಾರಿ ಬಹು| ಉಸ್ಮಾನ್ ಸಖಾಫಿ ಉಸ್ತಾದವರು ಹಾಗೂ ಸಂಘಟನಾ ಅಧ್ಯಕ್ಷರು ಶಫೀಕ್ ಮಾರ್ನಬೈಲ್, ಝೋನ್ ಶಿಕ್ಷಣಾಧ್ಯಕ್ಷರು ಜನಾಬ್ ಲತೀಫ್ ಮಂಜೇಶ್ವರ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಹಲವು ನೇತಾರರೂ ಕೆಸಿಎಫ್ ರುವಿ ಸೆಕ್ಟರ್ ಹಾಗೂ ಅಮರಾತ್ ಸೆಕ್ಟರ್ ನ ಹಲವು ಕಾರ್ಯಕರ್ತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಸಿಎಫ್ ಅಮರಾತ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜನಾಬ್ ಹನೀಫ್ ಮೂಳೂರ್ ರವರು ವಂದಿಸಿ ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Cb6f1319 49bf 4ddc 9346 69140ef0e14b 300x225 Aafc7359 8379 4a85 Bced 3ef761491ea7 225x300 82c5a484 5a4c 4ba7 A63f 2e666596904d 225x300 13a8f64d Af66 4e86 Bca5 39c448b318fc 225x300

Related Articles