ಶಾಲೆಗೆ ನೀಡುವ ನೆರವು ದೇವರಿಗೆ ನೀಡೋ ಕಾಣಿಕೆಗಳಿಂದನೂ ಹಿರಿದು – ರಾಜೇಶ್ ನಾಯಕ್….

ಬಂಟ್ವಾಳ: ಶಾಲೆಗೆ ನೀಡುವ ನೆರವು ದೇವರಿಗೆ ನೀಡೋ ಕಾಣಿಕೆಗಳಿಂದನೂ ಹಿರಿದು. ದೇವಸ್ಥಾನ ಗಳು ಧಾರ್ಮಿಕ ಕ್ಷೇತ್ರ ವಾದರೆ ಶಾಲೆಗಳು ಸವ೯ಧಮೀ೯ಯ ಕ್ಷೇತ್ರ ವಾಗಿದೆ .ಸಾಮಾನ್ಯ ಮಗು ಅಸಾಮಾನ್ಯ ಸಾಧನೆ ಮಾಡುವಲ್ಲಿ ಪ್ರೇರಕ ಶಕ್ತಿಯನ್ನು ಒದಗಿಸುವ ಮೂಲ ಕೇಂದ್ರ ವಾಗಿವೆ. ಇಂದು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಅವರು ಎಂ.ಆರ್.ಪಿ.ಎಲ್ ಮಂಗಳೂರು ಮತ್ತು ಮಾತಾ ಡೆವಲಪರ್ಸ್ ಪ್ರೈ. ಲಿ. ಸುರತ್ಕಲ್ ಸಹಯೋಗದಲ್ಲಿ ನಿರ್ಮಿಸಲಾಗುವ 10 ಕೊಠಡಿ ಮತ್ತು ಸಭಾಂಗಣ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಶಾಲಾ 99ನೇ ವಾರ್ಷಿಕೋತ್ಗವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ದಲ್ಲಿ
ನೆರವೇರಿಸಿ ಮಾತನಾಡಿದರು.
ಶಾಲೆ ದತ್ತು ಸ್ವೀಕರಿಸಿದ ಮಾತಾ ಡೆವಲಪರ್ಸ್ ಪ್ರೈ. ಲಿ. ಸುರತ್ಕಲ್ ಇದರ ಮುಖ್ಯಸ್ಥ ಹಾಗೂ ಶಾಲಾ ಹಳೇ ವಿದ್ಯಾರ್ಥಿ ಸಂತೋಷ್ ಶೆಟ್ಟಿ ಅರೆಬೆಟ್ಟು ಶಾಲೆಯ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.ಶಾಲೆ ಗಳಲ್ಲಿ ದೊರೆತ ಜ್ಞಾನವನ್ನು ತಮ್ಮ ಬದುಕಿನ ಲ್ಲಿ ಅಳವಡಿಸಿದಾಗ ಉತ್ತಮ ಫಲ ಕಾಣಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು .
ಜಿಲ್ಲಾ ಪಂಚಾಯತ್ ಸದಸ್ಯ ಮಂಜುಳಾ ಮಾಧವ ಮಾವೆ ತನ್ನ ಕ್ಷೇತ್ರದಲ್ಲಿ ಮಜಿ ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದ್ದು ತನ್ನ ಅನುದಾನದಲ್ಲಿ ಶಾಲೆಗೆ ಶಾಶ್ವತ ನೀರಿನ ವ್ಯವಸ್ಥೆ ಹಾಗೂ ಹೊಸ ಕಟ್ಟಡಕ್ಕೆ ಬೇಕಾದ ಪೀಠೋಪಕರಣಗಳನ್ನು ಒದಗಿಸುವ ಭರವಸೆ ನೀಡಿದರು ಶಾಲಾ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಲಾಂಛನ ಅನಾವರಣಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸದಸ್ಯೆ ಗೀತ ಚಂದ್ರಶೇಖರ್ ವೀರಕಂಭ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ವಿ.ಕೆ.ಅಬ್ಬಾಸ್, ಸದಸ್ಯರಾದ ಜಯಂತಿ ಜನಾರ್ದನ, ಪದ್ಮಾವತಿ, ಜಯಂತಿ, ಜನಾರ್ದನ ಪೂಜಾರಿ, ರಾಮಚಂದ್ರ ಪ್ರಭು, ಗಣ್ಯರಾದ ಎಂ.ತಿರುಮಲ ಕುಮಾರ್ ಮಜಿ, ಈಶ್ವರ ಭಟ್ ನಗ್ರಿಮೂಲೆ, ಎನ್. ದಿಲೀಪ್ ಕುಮಾರ್ ಎಂ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ, ವಿಶ್ವನಾಥ ಎಂ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೇಲ್ಕಾರ್, ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಹರೀಶ ಮಾಂಬಾಡಿ, ನಿವೃತ್ತ ಮುಖ್ಯ ಶಿಕ್ಷಕ ವಿಠಲ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ,ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮೇಶ ಗೌಡ, ವಿದ್ಯಾರ್ಥಿ ನಾಯಕ ಉದಿತ್ ರಾಜ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎನ್.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರಿಣಾಕ್ಷಿ ವಂದಿಸಿದರು. ಶಿಕ್ಷಕಿ ಸಂಗೀತಾ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button