ಸಹೋದರರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…
ಸುಳ್ಯ: ಅನಾರೋಗ್ಯ ಪೀಡಿತ ಅಬ್ದುಲ್ಲ ಅವರ ನಿಧನ ಸುದ್ದಿ ತಿಳಿದು ಅವರ ಸಹೋದರ ಅರಂತೋಡಿನ ಬದ್ರಿಯ ಜುಮ ಮಸ್ಜಿದ್ ಮಾಜಿ ಅಧ್ಯಕ್ಷ ಮೊಹಮದ್ ಹೃದಯಾಘಾತಕ್ಕೆ ಒಳಗಾಗಿ ನಿಧನ ಹೊಂದಿದ್ದಾರೆ. ಸಹೋದರರಿಬ್ಬರ ನಿಧನ ಅರಂತೋಡಿಗೆ ತುಂಬಲಾರದ ನಷ್ಟ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಬ್ಬರ ತಂದೆ ಬಾಬಾ ಹಾಜಿ ಯವರು ಅನ್ವರುಲ್ ಹುದಾ ಅಸೋಸಿಯೇಷನ್ ಸ್ಥಾಪಕ ಸದಸ್ಯರಾದ ದಿನದಿಂದ ತಳ್ಳು ಗಾಡಿ ಮೂಲಕ ಬಾಡಿಗೆ ಸಾಮಗ್ರಿಗಳನ್ನು ಕೊಂಡೋಯ್ದು ಸಂಸ್ಥೆಯನ್ನ ಮತ್ತು ಮಸೀದಿ ಹಾಗು ಊರಿನ ಅಭಿವೃದ್ಧಿಗೆ ದುಡಿದ ಸರಳ ವ್ಯಕ್ತಿಗಲಾಗಿದ್ದರು. ದಿವಂಗತ ಅಬ್ದುಲ್ಲ ಅವರ ಪುತ್ರ ಝುಬೈರ್ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾಗಿದ್ದು, ದಿವಂಗತ ಮಹಮದ್ ಅವರ ಪುತ್ರ ಮೆಡಿಕಲ್ ಶಾಪ್ ಮಜೀದ್ ಅನ್ವಾರುಲ್ ಹುದಾ ಯಂಗಮೆನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಇಬ್ಬರ ನಿಧನ ತುಂಬಲಾರದ ನಷ್ಟ ಎಂದು ಅನ್ವಾರುಲ್ ಹುದಾ ಯಂಗಮೆನ್ಸ್ ಸಂಸ್ಥೆಯ ಗೌರವಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪದಲ್ಲಿ ತಿಳಿಸಿದ್ದಾರೆ.
ಟಿ ಎಂ ಶಾಹಿದ್ ತೆಕ್ಕಿಲ್