ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಕಾರ್ಮಿಕ ಭವಿಷ್ಯ ನಿಧಿ ಮತ್ತು ರಾಜ್ಯ ಕಾರ್ಮಿಕರ ವಿಮಾ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರ…

ಪುತ್ತೂರು: ಕಾರ್ಮಿಕ ಭವಿಷ್ಯ ನಿಧಿ ಮತ್ತು ರಾಜ್ಯ ಕಾರ್ಮಿಕರ ವಿಮಾ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಯ ಶ್ರೀ ರಾಮ ಸಭಾಭವನದಲ್ಲಿ ಏ.28 ರಂದು ಏರ್ಪಡಿಸಲಾಗಿತ್ತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಆಶ್ರಯದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಮಂಗಳೂರು ವಿಭಾಗದ ಜಿಲ್ಲಾ ಸಂಪರ್ಕ ಅಭಿಯಾನದ ಅಡಿಯಲ್ಲಿ ನಿಧಿ ಆಪ್ ಕೇ ನಿಕಟ್ ಎನ್ನುವ ಕಾರ್ಯಕ್ರಮದನ್ವಯ ಇದನ್ನು ಆಯೋಜಿಸಲಾಗಿತ್ತು. ಕಾರ್ಮಿಕ ಭವಿಷ್ಯ ನಿಧಿಗೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಮತ್ತು ಕಾಲಕಾಲಕ್ಕೆ ಬದಲಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಮಿಕ ಭವಿಷ್ಯ ನಿಧಿ ಮಂಗಳೂರು ವಿಭಾಗದ ಆಯುಕ್ತ ರಜೀಬ್ ಮುಖರ್ಜಿ, ಅಕೌಂಟ್ ಆಫೀಸರ್ ಬಿ.ಬಿ.ವೇಣುಗೋಪಾಲ್ ಮತ್ತು ಡಿಪಿಎ ನೀತಾ ಉದಯಶಂಕರ್ ಮಾಹಿತಿ ನೀಡಿದರು. ರಾಜ್ಯ ಕಾರ್ಮಿಕರ ವಿಮಾ ಯೋಜನೆಯ ಬಗ್ಗೆ ಮಂಗಳೂರು ಕಛೇರಿಯ ಸೋಶಿಯಲ್ ಸೆಕ್ಯೂರಿಟಿ ಆಫೀಸರ್ ನೀಲಯ್ಯ ಹಾಗೂ ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ ಅಶ್ವಿನ್ ಕುಮಾರ್ ವಿವರವಾಗಿ ತಿಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿಗಳಾದ ಲಕ್ಷ್ಮೀಪ್ರಸಾದ್ ಹಾಗೂ ವೆಂಕಟ್ರಮಣ ಭಟ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಕಚೇರಿ ಮುಖ್ಯಸ್ಥರು, ಹಾಗೂ ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡರು. ಎಲೆಕ್ಟ್ರಾನಿಕ್ಸ್ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

seminar on epf & esi (4)

seminar on epf & esi (3)

Related Articles

Back to top button