ಶ್ರೀ ಲಕ್ಷ್ಮೀ ವೆಂಕಟರಮಣ ಕುರಿಂದು ಉತ್ಸವ…..
ಪುತ್ತೂರು: ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ವಾರ್ಷಿಕ ಉತ್ಸವಗಳ ಅಂಗವಾಗಿ ನಡೆಯುವ ದೇವರ ಕುರಿಂದು ಉತ್ಸವ ನ.12 ರ ರಾತ್ರಿ ನಗರದ ದರ್ಬೆ ವೃತ್ತದ ಬಳಿ ನಡೆಯಿತು.
ಕುರಿಂದು ಉತ್ಸವದ ಪೂರ್ವಭಾವಿಯಾಗಿ ದೇವರ ಪುಷ್ಪಾಲಂಕೃತ ಬೆಳ್ಳಿ ಪಲ್ಲಕ್ಕಿಯ ಉತ್ಸವ ಮಂಗಳವಾರ ರಾತ್ರಿ ದೇವಾಲಯದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ದರ್ಬೆಗೆ ತೆರಳಿತು. ದರ್ಬೆಯಲ್ಲಿನ ಕುರಿಂದುವಿನಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ನೈವೇದ್ಯ ಸಮರ್ಪಣೆ, ಕರ್ಪೂರ ಸೇವೆ ಬಳಿಕ ಮಂಗಳಾರತಿ ನೆರವೇರಿಸಲಾಯಿತು.
ಪುತ್ತೂರು ದೇವಾಲಯದಲ್ಲಿ ಉತ್ಥಾನ ದ್ವಾದಶಿಯಿಂದ ವೈಶಾಖ ಹುಣ್ಣಿಮೆಯವರೆಗೆ ನಡೆಯುವ ಉತ್ಸವಗಳಲ್ಲಿ ಕುರಿಂದು ಉತ್ಸವ ಪ್ರಮುಖವಾಗಿದೆ. ದೇವಾಲಯದ ಆಡಳಿತ ಮೊಕ್ತೇಸರ ಪಿ. ರಾಧಾಕೃಷ್ಣ ಭಕ್ತ ಹಾಗೂ ಮೊಕ್ತೇಸರರು ಮತ್ತು ಜಿಎಸ್‍ಬಿ ಸಮಾಜದ ಪ್ರಮುಖರು, ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.