ಡಾ. ಕಾರಂತ ಬಾಲವನ ಪ್ರಶಸ್ತಿ ಪ್ರಧಾನ ಸಮಾರಂಭ…..

ಪುತ್ತೂರು: ಡಾ. ಶಿವರಾಮ ಕಾರಂತರ ಬಗ್ಗೆ ಬಾಲವನದಲ್ಲಿ ಮಾತನಾಡುವುದು ಆಗುಂಬೆ ಘಾಟಿಯ ಮೇಲೆ ನಿಂತು ಮಳೆಯ ಬಗ್ಗೆ ಮಾತನಾಡಿದಂತೆ. ಅವರೊಬ್ಬ ಮನುಷ್ಯ ವಿಕಾಸವಾದದ ಹರಿಕಾರರಾಗಿದ್ದರು. ಧರ್ಮದ ಹೆಸರಿಲ್ಲಿ ಜನರನ್ನು ಒಡೆಯುವ, ಲಿಂಗ ತಾರತಮ್ಯವನ್ನು ಪೋಷಿಸುವ ಗಲೀಜು ರಾಜಕಾರಣದ ವಿರುದ್ದ ಧ್ವನಿ ಎತ್ತಿದ್ದ ಡಾ. ಕಾರಂತರು ಪ್ರತ್ಯೇಕತಾವಾದಿಯಲ್ಲ ಏಕತಾವಾದಿಯಾಗಿದ್ದಾರೆ ಎಂದು ಹಿರಿಯ ಸಾಹಿತಿ, ಚಿಂತಕ ಜಯಂತ ಕಾಯ್ಕಿಣಿ ಹೇಳಿದರು.
ಅವರು ಗುರುವಾರ ಸಂಜೆ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ. ಕಾರಂತರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಶಿವರಾಮ ಕಾರಂತ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ವಿ. ರೂಪೇಶ್ ಅವರು ಜಯಂತ ಕಾಯ್ಕಿಣಿ ಅವರಿಗೆ ಬಾಲವನ ಪ್ರಶಸ್ತಿ- 2019ನ್ನು ಪ್ರದಾನ ಮಾಡಿ ಗೌರವಿಸಿ, ಶುಭ ಹಾರೈಸಿದರು.
ಡಾ.ಶಿವರಾಮ ಕಾರಂತರ ಪುತ್ರಿ, ಖ್ಯಾತ ಒಡಿಸ್ಸಿ ಕಲಾವಿದೆ ಹಾಗೂ ಬಾಲವನ ಅಭಿವೃದ್ಧಿ ಸಮಿತಿ ಸದಸ್ಯೆ ಕ್ಷಮಾ ರಾವ್ ಅಭಿನಂದನಾ ಮಾತುಗಳನ್ನಾಡಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಪುತ್ತೂರು ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ, ವಿಶ್ರಾಂತ ಪ್ರಿನ್ಸಿಪಾಲ್ ಡಾ. ಮಾಧವ ಭಟ್, ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸವಣೂರು ಸೀತಾರಾಮ ರೈ, ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರ್, ತಹಸೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.
ಸಹಾಯಕ ಆಯುಕ್ತರಾದ ಬಾಲವನ ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಕೆ. ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ರಾಜೇಶ್ ಜಿ ವಂದಿಸಿದರು. ಉಪನ್ಯಾಸಕ ಡಾ.ಎಚ್.ಜಿ. ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button