ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ – ನೂತನ ಅಧ್ಯಕ್ಷ ರಾಗಿ ಪಿ‌.ಸಿ.ಜಯರಾಮ…

ಸುಳ್ಯ: ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣರಾದ ಪಿ.ಸಿ.ಜಯರಾಮ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾಕ್ಷಿ ಜೆ. ರೈ ಆಯ್ಕೆಯಾಗಿದ್ದಾರೆ.
ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ಆ. 29 ರಂದು ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.
ಸಮಿತಿಯ ಕೋಶಾಧಿಕಾರಿಯಾಗಿ ದಿನೇಶ್ ಮಡ್ತಿಲ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ , ಎಸ್.ಸಂಶುದ್ದೀನ್, ಡಾ.ಲೀಲಾಧರ್ ಡಿ.ವಿ., ಬಿ.ಕೆ.ಮಾಧವ, ಡಾ.ಹರಪ್ರಸಾದ್ ತುದಿಯಡ್ಕ, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಮೊಗರ್ಪಣೆ, ಭವಾನಿಶಂಕರ್ ಅಡ್ತಲೆ, ದೀಪಕ್ ಕುತ್ತಮೊಟ್ಟೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಮ ಯೇನೆಕಲ್, ದೊಡ್ಡಣ್ಣ ಬರೆಮೇಲು , ಚಂದ್ರಶೇಖರ ಪೇರಾಲು , ಡಾ.ಪುರುಷೋತ್ತಮ ಕೆ.ಜಿ., ಶ್ರೀಮತಿ ಉಷಾ ಎಸ್. ಶೇಖ, ಡಾ.ಎನ್.ಎ.ಜ್ಞಾನೇಶ್, ದಿನೇಶ್ ಅಂಬೆಕಲ್ಲು ಮತ್ತು ಹರೀಶ್ ಬಂಟ್ವಾಳ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ ಎ.ಎಲ್. ಹಾಗೂ ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚಿನ 605 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಎಲಿಮಲೆ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಿತಾಶ್ರೀ ಪಿ ಇವರುಗಳನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

IMG 20200829 WA0101 1024x575 1 300x168

IMG 20200829 WA0100 1 1024x575 1 300x168

Related Articles

Leave a Reply

Your email address will not be published. Required fields are marked *