SSF ಸುಳ್ಯ ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ…

312 ನೇ ಶಿಬಿರದಲ್ಲಿ 40 ಯೂನಿಟ್ ರಕ್ತ ಸಂಗ್ರಹ...

ಸುಳ್ಯ: SSF ಸುಳ್ಯ ಸೆಕ್ಟರ್ ವತಿಯಿಂದ ಲೇಡಿಗೊಶನ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಎಸ್ ಎಸ್ ಎಫ್ ಬ್ಲಡ್ ಸೈಬೋ ಕರ್ನಾಟಕ ಇದರ 312ನೇ ಬೃಹತ್ ರಕ್ತದಾನ ಶಿಬಿರ ಸುನ್ನೀ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಾಯಿತು.
ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಸುಳ್ಯದಲ್ಲಿ ಬಹಳ ಯಶಸ್ವಿಯಿಂದ ನಡೆಯಲಾಯಿತು.
ಈ ಕಾರ್ಯಕ್ರಮದಲ್ಲಿ ಮುಸ್ತಫಾ ಹಾಜಿ ಜನತಾ ಉದ್ಘಾಟನೆಯನ್ನು ನಿರ್ವಹಿಸಿದರು. ನಗರ ಪಂಚಾಯತ್ ಸದಸ್ಯ ಉಮರ್ ಕೆ ಎಸ್ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಬೂಬಕ್ಕರ್ ಜಟ್ಟಿಪಳ್ಳ, ಆದಂ ಹಾಜಿ ಕಮ್ಮಾಡಿ, ನಿಝಾರ್ ಸಖಾಫಿ, ಅಬ್ದುಲ್ ರಹಿಮಾನ್ ಮೊರ್ಗಪಣೆ, ಅಬೂಬಕ್ಕರ್ ಸಿದ್ದೀಕ್ ಕಟ್ಟೇಕ್ಕಾರ್, ಅಬೂಬಕ್ಕರ್ ಸಿದ್ದೀಕ್ ಗೂನಡ್ಕ, ಅಜೀಜ್ ಫೂಟ್ ವೇರ್, ಎಸ್ ಪಿ ಅಬೂಬಕರ್, ಮಜೀದ್ ಅರಂಬೂರ್, ಸ್ವಭಾಹ್ ಹಿಮಮಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ವಂದಿಸಿದರು.
ಸುಮಾರು 40 ರಕ್ತದಾನಿಗಳು ಶಿಬಿರದಲ್ಲಿ ಸ್ವಯಂ ಪ್ರೇರಿರತ ರಕ್ತದಾನ ಮಾಡಿದರು,
ಸೆಕ್ಟರ್ ಸದಸ್ಯರು ಯುನಿಟ್ ಕಾರ್ಯಕರ್ತರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

whatsapp image 2024 02 25 at 9.59.37 pm

whatsapp image 2024 02 25 at 9.59.37 pm (1)

Related Articles

Back to top button