ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಅರಂತೋಡು ದುಬೈ ಕಮಿಟಿ ವತಿಯಿಂದ ಸನ್ಮಾನ…

ದುಬೈ: ವಿವಿಧ ಕಾರ್ಯಕ್ರಮದ ನಿಮಿತ್ತ ದುಬೈ ಗೆ ಬೇಟಿ ನೀಡಿರುವ ಕೆಪಿಸಿಸಿ ಮುಖ್ಯ ವಕ್ತಾರರಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಅರಂತೋಡು ದುಬೈ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ದುಬೈ ಸಮಿತಿಯ ಅಧ್ಯಕ್ಷರಾದ ಮುಖ್ತಾರ್ ಪಟೇಲ್ ಮಾತನಾಡಿ ಧಾರ್ಮಿಕ , ಸಾಮಾಜಿಕ, ವ್ಯಾಪಾರ ,ಸಮಾಜಸೇವೆ ಅದೇ ರೀತಿ ಅರಂತೋಡು ಮಸೀದಿ, ಮದ್ರಸ ಹಾಗೂ ಶಾಲಾ ಕಾಲೇಜು ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಟಿ ಎಂ ಶಾಹಿದ್ ತೆಕ್ಕಿಲ್ ಅವರ ಕೊಡುಗೆ ಮತ್ತು ಸಹಾಯ ಅಪಾರವಾದದ್ದು. ಬಿಡುವಿಲ್ಲದ ಸಮಯದಲ್ಲಿ ಅರಂತೋಡು ದುಬೈ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಸಲಹೆ ಸೂಚನೆ ನೀಡಿ ಅರತೋಡು ಜಮಾತ್ ಗೆ ದುಬೈ ಸಮಿತಿ ನೀಡಿದ ಸಹಾಯ ಸಹಕಾರವನ್ನು ಕೊಂಡಾಡಿ ಇನ್ನೂ ಕೂಡ ನಿಮ್ಮ ಸಹಾಯ ಸಹಕಾರ ಮುಂದುವರಿಸಬೇಕು. ಅರಂತೋಡು ಜಮಾತ್ ನಲ್ಲಿ ಎಲ್ಲರೂ ಒಂದೇ ಕುಟುಂಬಸ್ಥರ ಹಾಗೆ ಇದ್ದು ಮಸೀದಿ ಹಾಗೂ ಊರಿನ ಏಳಿಗೆಯಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಹೇಳಿ ಸಮಿತಿಯ ಕಾರ್ಯ ವೈಕರ್ಯವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಖಜಾಂಜಿ ನಾಸಿರುದ್ದೀನ್ ಪಟೇಲ್, ಸರ್ಫರಾಜ್ ನವಾಜ್ ,ಸಲಹಾ ಸಮಿತಿ ಸದಸ್ಯರಾದ ಸೈಫುದ್ದೀನ್ ಪಟೇಲ್ , ರಿಫಾಯಿ ಪಟೇಲ್, ಬಾತಿಷಾ ಬಿಳಿಯಾರ್, ಟಿ ಎಂ ಶಾಝ್ ತೆಕ್ಕಿಲ್ ಉಪಸ್ಥಿತರಿದ್ದರು.

whatsapp image 2024 02 25 at 3.01.46 pm

Related Articles

Back to top button