ಪೆರಾಜೆಯಲ್ಲಿ ಶ್ರೀವರಮಹಾಲಕ್ಷ್ಮೀ ವ್ರತ , ರಕ್ಷಾ ಬಂಧನ ಆಚರಣೆ…

ಬಂಟ್ವಾಳ ಆ.8 :ಶ್ರೀಮಹಾಲಕ್ಷ್ಮೀ ಮಹಿಳಾ ಸೇವಾಸಮಿತಿ ಪೆರಾಜೆ ಇದರ ವತಿಯಿಂದ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಮತ್ತು ರಕ್ಷಾ ಬಂಧನ ಉತ್ಸವ ಜರಗಿತು.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ಗಾಯತ್ರಿ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಗುಡ್ಡಚಾಮುಂಡೇಶ್ವರಿ ಸೇವಾಟ್ರಸ್ಟ್ ಅಧ್ಯಕ್ಷ ಮಾಧವ ಕುಲಾಲ್, ಕಾರ್ಯದರ್ಶಿ ರಾಘವ ಗೌಡ ,ಉಮೇಶ್ ಎಸ್.ಪಿ. , ಹರೀಶ್ ರೈ ಪಾಣೂರು, ಶ್ರೀನಿವಾಸ ಪೂಜಾರಿ, ನಾರಾಯಣ ಎಮ್.ಪಿ. ಸಹಕರಿಸಿದರು.
ಮಹಿಳಾ ಸೇವಾ ಸಮಿತಿಯ ಗೌರವಾಧ್ಯಕ್ಷೆ ಸುಂದರಿ ರೈ, ಗೌರವ ಸಲಹೆಗಾರರು ಪನಿಪ ಮಾಧವ, ಅಧ್ಯಕ್ಷೆ ಮೀನಾಕ್ಷಿ ರಾಘವ ಗೌಡ, ಕಾರ್ಯದರ್ಶಿ ಧನಲಕ್ಷ್ಮಿ, ಉಪಾಧ್ಯಕ್ಷೆ ರಾಜೀವಿ ಬಡೆಕೋಡಿ, ಅಮಿತ ಅನಿಲ್, ಜೊತೆಕಾರ್ಯದರ್ಶಿ ರೋಹಿಣಿ , ರೇವತಿ, ಕೋಶಾಧಿಕಾರಿ ಭಾರತಿ ಜಯಾನಂದ ಪೆರಾಜೆ, ಸಂಘಟನಾ ಕಾರ್ಯದರ್ಶಿ ರತ್ನ ಮಂಜೊಟ್ಟಿ , ಸದಸ್ಯರುಗಳಾದ ಗುಲಾಬಿ, ಮಮತ ಮಿತ್ತಪೆರಾಜೆ, ಸುಧಾ ನಾಯ್ಕ್, ಲತಾ, ಲೀಲಾವತಿ , ಭಾರತಿ ಕೆ., ಗೀತಾ ಉಮೇಶ್ ,ರಾಜೀವಿ ಜೊಗಿಬೆಟ್ಟು, ರೂಪ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.