ಡಾ.ಮಾಲತಿ ಶೆಟ್ಟಿ ಮಾಣೂರುರವರಿಗೆ “ಪಂಪ ಸದ್ಭಾವನ ” ರಾಜ್ಯ ಪ್ರಶಸ್ತಿ ಪ್ರದಾನ…

ಬೆಂಗಳೂರು: ರಂಗ ಸಂಭ್ರಮ 2025 ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏ. 5ರಂದು ನಡೆಯಿತು.
ಕಾರ್ಯಕ್ರಮವನ್ನು ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ.ನಾಗರಾಜು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪಂಪ ಸದ್ಭಾವನಾ 2025 ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಸೇವೆಗಾಗಿ ಪ್ರತಿಷ್ಠಿತ “ಪಂಪ ಸದ್ಭಾವನಾ” ರಾಜ್ಯ ಪ್ರಶಸ್ತಿಯನ್ನು ನಿವೃತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿಗಳಾದ ಎನ್ ಸಂತೋಷ ಹೆಗ್ಡೆ ಅವರು ಪ್ರಧಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ , ನಿವೃತ್ತ ಡಿ.ಸಿ ಡಾ. ಡಿ ವಿಶ್ವನಾಥ್ , ಡಾ ಲಕ್ಷ್ಮೀದೇವಿ ಬೆಂಗಳೂರು. ಕಲಾಜಗತು ರೂವಾರಿ ತೋನ್ಸೆ ವಿಜಯ ಕುಮಾರ್ ಶೆಟ್ಟಿ , ಡಾ.ಪುತೂರಾಯ, ರಾಷ್ಟ್ರೀಯ ಭಷ್ಟೃಚಾರ ನಿಗ್ರಹ ದಳದ ಡಾ .ಪ್ರವೀಣ್ ಹೀರೆಮಠ್ , ವೇದ ಮೂರ್ತಿ ಡಾ.ಕಾಡ್ಯಯ, ಸರಿಗಮ ಸಂಗೀತಗಾರ ಜಿ.ಕೆ ರಾಜು, ವೀರೇಶ್ ಮುತಿನ ಮಠ, ಕೆಂಚನೂರು ಶಂಕರ್ ಉಪಸ್ಥಿತರಿದ್ದರು.