ಹಿರಿಯ ಸಹಕಾರಿ ಧುರೀಣ ಕೆ.ಎಸ್. ದೇವರಾಜ್ ನಿಧನಕ್ಕೆ ಟಿ.ಎಂ.ಶಹೀದ್ ತೆಕ್ಕಿಲ್ ಸಂತಾಪ…

ಸುಳ್ಯ : ಹಿರಿಯ ಸಹಕಾರಿ ಧುರೀಣ ಕೆ.ಎಸ್. ದೇವರಾಜ್ ರವರ ನಿಧನಕ್ಕೆ ಕಾಂಗ್ರೇಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿ, ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾಗಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ, ಏನೆಕಲ್ಲು ಸಹಕಾರಿ ಸಂಘದ ಅಧ್ಯಕ್ಷರಾಗಿ ಮತ್ತು ಕಾಂಗ್ರೇಸ್ ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿ, ಪಕ್ಷದ ತತ್ವ ಸಿದ್ಧಾಂತದಲ್ಲಿ ನಂಬಿಕೆ ಮತ್ತು ಕಳಕಳಿ ಇಟ್ಟಿದ್ದರು. ಅವರ ಅಕಾಲಿಕ ನಿಧನವು ಸಮಾಜಕ್ಕೆ ಮತ್ತು ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಟಿ.ಎಂ.ಶಹೀದ್ ಪ್ರಾರ್ಥಿಸಿ, ಸಂತಾಪ ವ್ಯಕ್ತಪಡಿಸಿದ್ದಾರೆ.
ಟಿ.ಎಂ.ಶಹೀದ್ ತೆಕ್ಕಿಲ್