ಮಿಷನ್ ಪವರ್ ಕಾರ್ಯಕ್ರಮದಲ್ಲಿ ಟಿ. ಎಂ ಶಾಹೀದ್ ತೆಕ್ಕಿಲ್ ಭಾಗಿ-ಸನ್ಮಾನ…

ಮಂಗಳೂರು: ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ. ಎಂ ಶಾಹೀದ್ ತೆಕ್ಕಿಲ್ ಅವರು ಅ.19 ರಂದು ಮಂಗಳೂರಿನಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇದರ ಆಶ್ರಯದಲ್ಲಿ ನಡೆದ (ಮಿಷನ್ ಪವರ್) ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಡಾ|ಯೆನೆಪೋಯ ಆಬ್ದುಲ್ಲ ಕು೦ಞ, ಡಾ |ಇಫ್ತಿಕರ್ ಅಲಿ ಫರೀದ್ , ಸಯ್ಯದ್ ಬ್ಯಾರಿ, ಉಮರ್ ಟಿ ಕೆ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಹಾಗೂ ಇತರ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಎ. ಗಪೂರ್ ಜೊತೆ ಸನ್ಮಾನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ತಮ್ಮನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತೊಡಗಿಸಿ ಕೊಳ್ಳುವುದರ ಮೂಲಕ ಬಡವರ ಮತ್ತು ಶೋಷಿತರ ಕಣ್ಣೊರೆಸುವ ಮೂಲಕ ದೇಶ ಸೇವೆಯನ್ನು ಮಾಡಬೇಕೆಂದು ಕರೆ ನೀಡಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.