ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಮ್ಮಿಲನ…
ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಸಂಭ್ರಮಿಸಿದ ಹಿರಿಯ ವಿದ್ಯಾರ್ಥಿಗಳು...

ಸುಳ್ಯ: 1950 ರಲ್ಲಿ ಸುಳ್ಯದ ಪ್ರಥಮ ಪ್ರೌಢ ಶಾಲೆಯಾಗಿ ಪ್ರಾರಂಭಗೊಂಡು 1975 ರಲ್ಲಿ ಪದವಿ ಪೂರ್ವ ಕಾಲೇಜು ಆಗಿ ಉನ್ನತಿ ಗೊಂಡು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್, ಆರ್. ಕೆ. ನಾಯರ್ ರಂತಹ ಮಹಾ ಮೇಧಾವಿಗಳನ್ನು ನಾಡಿಗೆ ಸಮರ್ಪಿಸಿದ ಸುಳ್ಯ ಸರಕಾರಿ ಜೂನಿಯರ್ ಕಾಲೇಜು ಅಮೃತ ಮಹೋತ್ಸವದ ದಶ ಕಾರ್ಯಕ್ರಮದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ಸಂವಾದ, ಪರಸ್ಪರ ಪರಿಚಯ, ಗುರುವಂದನೆ, ಹಳೆ ಗುರುಗಳೊಂದಿಗೆ ಮಾತನಾಡುವ ಸುವರ್ಣ ಅವಕಾಶ, ಆಟೋಟ ಸ್ಪರ್ಧೆ, ಕ್ವಿಜ್ ಮೊದಲಾದ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಂಡಿತು.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಯಾಗಿ ವಿವಿಧ ಕ್ಷೇತ್ರದಲ್ಲಿ ಬೆಳಗಿದ ಸಾಧಕರಿಂದ ಹಣತೆಯನ್ನು ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಗಿರೀಶ್ ಭಾರದ್ವಾಜ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಪ್ರಾoಶುಪಾಲ ನಿರಂಜನ್ ಚಿಪ್ಲೂಣ್ಕರ್, ಕೊಡಗು ಯೂನಿವರ್ಸಿಟಿ ರಿಜಿಸ್ಟ್ರಾರ್ ಡಾ. ಸುರೇಶ್, ಎಂ. ಆರ್. ಪಿ. ಎಲ್ ಎಂ. ಡಿ ಸತೀಶ್, ಡಾ ವೀಣಾ, ಹಿರಿಯ ಕಲಾವಿದ ಗೋಪಾಡ್ಕರ್, ಮೈಸೂರು ರಂಗಾಯಣದ ಎಂ. ಎಸ್. ಗೀತಾ, ಸುಳ್ಯ ರಂಗಮನೆ ನಿರ್ದೇಶಕ ಜೀವನ್ ರಾo, ದ. ಕ. ಮತ್ತು ಉಡುಪಿ ಜಿಲ್ಲೆಗಳ ಜೇನು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ನಿವೃತ್ತ ಪ್ರಾoಶುಪಾಲರುಗಳಾದ ಲಿಂಗಪ್ಪ ಗೌಡ, ದಾಮೋದರ ಮಾಸ್ತರ್, ಚಂದ್ರಶೇಖರ ಕಾಂತಮಂಗಲ, ಕರ್ನಾಟಕ ಬೃಹತ್ ಉದ್ದಿಮೆಗಳ ಸ್ಕ್ರೀನಿಂಗ್ ಕಮಿಟಿ ನಿರ್ದೇಶಕರಾಗಿದ್ದ ಶಿವ ನಾಯ್ಕ್, ಡಾ. ರಂಗಯ್ಯ, ಸುಬ್ಬಯ್ಯ ಮಾಸ್ತರ್, ಸದರ್ನ್ ರೈಲ್ವೆಸ್ ನಿವೃತ್ತ ಅಧಿಕಾರಿ ಶೇಷಪ್ಪ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರ ಶೇಖರ ಪೆರಾಲು, ನಿವೃತ್ತ ಇಂಜಿನಿಯರ್ ಸಂಕಪ್ಪ ಗೌಡ, ಅಜ್ಜಾವರ ಚೈತನ್ಯ ಸ್ವಾಮಿ,ಮಾವಜಿ ಮುದ್ದಪ್ಪ ಗೌಡ, ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಂ. ಬಿ. ಸದಾಶಿವ, ಸಂಘಟನಾ ಕಾರ್ಯದರ್ಶಿ ಕೆ. ಎಂ. ಮುಸ್ತಫಾ, ಪ್ರಾoಶುಪಾಲ ಮೋಹನ್ ಗೌಡ ಬೊಮ್ಮಟ್ಟಿ, ಉಪ ಪ್ರಾoಶುಪಾಲ ಪ್ರಕಾಶ್ ಮೂಡಿತ್ತಾಯ, ಕಾರ್ಯದರ್ಶಿ ಶಿವಪ್ರಕಾಶ್ ಕೇರ್ಪಳ, ಕೋಶಾಧಿಕಾರಿ ರಾಮಚಂದ್ರ ಗೌಡ, ಎಸ್. ಡಿ. ಎಂ. ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಮೊದಲಾದವರು ವೇದಿಕೆಯಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ ಸ್ವಾಗತಿಸಿ, ಕೆ. ಟಿ. ವಿಶ್ವನಾಥ್ ವಂದಿಸಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗುರುಗಳನ್ನು ಸನ್ಮಾನಿಸಲಾಯಿತು, ಸಹಭೋಜನ, ಗ್ರೂಪ್ ಫೋಟೋ ಮೊದಲಾದ ಎಲ್ಲಾ ಹಂತದಲ್ಲೂ ಹಳೆ ವಿದ್ಯಾರ್ಥಿಗಳು ಸಂಭ್ರಮಿಸಿದರು.