ಕೆ.ಎಸ್. ದೇವರಾಜ್ ನಿಧನಕ್ಕೆ ವೆಂಕಪ್ಪ ಗೌಡ ಸಂತಾಪ…

ಸುಳ್ಯ: ಸಹಕಾರಿ ಧುರೀಣ ಕೆ.ಎಸ್. ದೇವರಾಜ್ ನಿಧನಕ್ಕೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ . ವೆಂಕಪ್ಪ ಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ.ಎಸ್. ದೇವರಾಜ್ ನಿಧನದ ಸುದ್ದಿ ಕೇಳಿ ನನಗೆ ತೀವ್ರ ಆಘಾತ , ನೋವು ಉಂಟಾಯಿತು. ಅವರು ನಮ್ಮ ಪಕ್ಷದ ನಾಯಕರಾಗಿದ್ದು ಸುಳ್ಯ ತಾಲೂಕು ಮತ್ತು ಜಿಲ್ಲೆಯ ನಾಯಕರಾಗಿ ಬೆಳೆದು ಬಂದವರು. ಅವರು ಹಲವಾರು ನಾಯಕರುಗಳ ಒಡನಾಟ ಹೊಂದಿದ್ದು ಅತ್ಯಂತ ನಂಬಿಕೆಯ ನಾಯಕತ್ವದ ಗುಣವನ್ನು ಹೊಂದಿದ್ದರು. ಅವರು ಸುಬ್ರಹ್ಮಣ್ಯ ಗ್ರಾಮಪಂಚಾಯತ್
ಅಧ್ಯಕ್ಷರಾಗಿ, ಗುತ್ತಿಗಾರು ಜಿಲ್ಲಾ ಪಂಚಾಯತ್ ಸದಸ್ಯರಾಗಿ , ಏನೆಕಲ್ ಸಿ ಎ ಬ್ಯಾಂಕ್ ಅಧ್ಯಕ್ಷರಾಗಿ , ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ದುಡಿದ ಅನುಭವಿ ರಾಜಕಾರಣಿ. ಮಾತ್ರವಲ್ಲದೆ ಸಾಮಾಜಿಕ , ಧಾರ್ಮಿಕ ಸೇವಾಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಒಬ್ಬ ಉತ್ತಮ ವಾಗ್ಮಿಯನ್ನು ನಾವು ಕಳೆದುಕೊಂಡಿರುವುದು ನಿಜಕ್ಕೂ ದುಃಖದ ಸಂಗತಿ. ಅವರ ಅಗಲುವಿಕೆ ತುಂಬಾ ದುಃಖ ತಂದಿದೆ . ಅದೇ ರೀತಿ ಅವರ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಪ್ರಾರ್ಥಿಸುತ್ತೇನೆ ಎಂದು ವೆಂಕಪ್ಪ ಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಂ . ವೆಂಕಪ್ಪ ಗೌಡ

Sponsors

Related Articles

Back to top button