ಎಸ್.ವಿ.ಎಸ್. ಶಾಲಾ ಸಂಸತ್ತು ರಚನೆ…
ಬಂಟ್ವಾಳ :ಎಸ್.ವಿ.ಎಸ್.ಪ್ರೌಢ ಶಾಲಾ ವಿದ್ಯಾರ್ಥಿಗಳ ಶಾಲಾ ಸಂಸತ್ತು ರಚನೆ ಮತ್ತು ಉದ್ಘಾಟನೆ ಜು. 25 ರಂದು ನಡೆಯಿತು.
ಶಾಲಾ ಆಡಳಿತ ಮಂಡಳಿ ಸದಸ್ಯ ಶಿವಾನಂದ ಬಾಳಿಗಾ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ನಾಯಕತ್ವ ಗುಣ
ಬೆಳೆಸಿಕೊಂಡು ಜವಾಬ್ದಾರಿ ನಿರ್ವಹಿಸಬೇಕೆಂದರು.
ಶಿಕ್ಷಕ ಶೇಖರ ಬಿ.ಪ್ರತಿಜ್ಞಾ ವಿಧಿ ಭೋದಿಸಿದರು. ಶಿಕ್ಷಕರಾದ ಪ್ರಶಾಂತ ಎನ್.ಎಂ.ಸ್ವಾಗತಿಸಿದರು.ದಾಮೋದರ ಪಡಿಯಾರ್ ನಿರೂಪಿಸಿ,ಮುರಳೀಧರ ಪಿ. ವಂದಿಸಿದರು.
ಶಾಲಾ ನಾಯಕಿಯಾಗಿ ಪೂಜಿತಾ ಹಾಗೂ ನಾಯಕನಾಗಿ ಲಕ್ಷ್ಮೀಪ್ರಸಾದ ಆಯ್ಕೆಯಾದರು. ವಿದ್ಯಾರ್ಥಿ ಮಂತ್ರಿಮಂಡಲ ರಚಿಸಲಾಯಿತು.