ದೂರದರ್ಶನ ಕಲಾವಿದೆಯಾಗಿ ಅಯನಾ. ವಿ. ರಮಣ್ ಆಯ್ಕೆ…
ಮೂಡುಬಿದಿರೆ:ಬಹುಮುಖ ಪ್ರತಿಭೆಯ ಹೆಸರಾಂತ ಕಲಾವಿದೆ ಅಯನಾ. ವಿ. ರಮಣ್ ಮೂಡುಬಿದಿರೆ, ದೂರದರ್ಶನ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ .
ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾರ್ಗದರ್ಶನದಲ್ಲಿ , ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಿದ್ದ ಅವರು ” ಬಿ ” ಗ್ರೇಡ್ ಮಾನ್ಯತೆ ಪಡೆದಿದ್ದಾರೆ .
ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ ಸಾಧನೆಗೆ ಉಡುಪಿ ಶ್ರೀ ಕೃಷ್ಣ ಮಠ – ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಶ್ರೀಪಾದರು ಆಶೀರ್ವಾದ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .
ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು , ಅಯನಾ .ವಿ. ರಮಣ್ ನಡೆಸುವ ನೃತ್ಯ ಸಂಸ್ಥೆ “ನಾಟ್ಯಾಯನ ಮೂಡುಬಿದಿರೆ ” ಮತ್ತು ನೃತ್ಯ ಗುರುವಾಗಿರುವ “ರಂಗಭಾರತಿ ಕಲಾಮಂದಿರಮ್”, ಕುಶಾಲನಗರ , ಸಂಸ್ಥೆಗಳ ಪದಾಧಿಕಾರಿಗಳು- ವಿದ್ಯಾರ್ಥಿಗಳು- ಹೆತ್ತವರು ಅಭಿನಂದಿಸಿದ್ದಾರೆ .
ಮನೆ- ಮನೆಗೆ ಭರತನಾಟ್ಯ ಮತ್ತು ವಿಶಿಷ್ಟವಾದ ನಾಟ್ಯಾಯನ ಕಾರ್ಯಕ್ರಮಗಳನ್ನು ದೇಶ – ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಅಯನಾ ಮೈಸೂರು ವಿವಿ ಯಲ್ಲಿ ಆಂಗ್ಲ ಭಾಷೆಯ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ಅಯನಾ .ವಿ. ರಮಣ್ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ.ಮುಕಾಂಬಿಕಾ .ಜಿ. ಎಸ್ ಮತ್ತು ಶ್ರೀ ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ದಂಪತಿಯ ಪುತ್ರಿಯಾಗಿದ್ದಾರೆ.