ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಆರೋಗ್ಯಕ್ಕಾಗಿ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನಲ್ಲಿ ವಿಶೇಷ ಪ್ರಾರ್ಥನೆ…

ಸುಳ್ಯ: ಮುಹಿಯುದ್ದೀನ್ ಜುಮಾ ಮಸ್ಜಿದ್ ಪೇರಡ್ಕ ಇದರ ಗೌರವ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಟಿ ಎಂ ಶಹೀದ್ ತೆಕ್ಕಿಲ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯಸಭಾ ಸದಸ್ಯರೂ ಆದ ಆಸ್ಕರ್ ಫರ್ನಾಂಡಿಸ್ ರವರ ಆರೋಗ್ಯಕ್ಕಾಗಿ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನಲ್ಲಿ ವಿಶೇಷ ದುವಾ ಪ್ರಾರ್ಥನೆ ನಡೆಯಿತು.
ಅರಂತೋಡು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಇಸಾಕ್ ಬಾಖವಿಯವರು ದುವಾ ನೇತೃತ್ವ ವಹಿಸಿದ್ದರು. ಪೇರಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬರಾದ ರಿಯಾಸ್ ಫೈಜಿ ಎಮ್ಮೆಮಾಡು ನೂರುದ್ದೀನ್ ಅನ್ಸಾರಿ ಪೇರಡ್ಕ, ಸಾಜಿದ್ ಅಝ್ಹರಿ ತೆಕ್ಕಿಲ್ ಪೇರಡ್ಕ , ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಬದ್ರಿಯಾ ಜುಮಾ ಮಸ್ಜಿದ್ ಅರಂತೋಡು ಇದರ ಅಧ್ಯಕ್ಷರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಮಸೀದಿ ಕಾರ್ಯದರ್ಶಿಗಳಾದ ಟಿ ಎಂ ರಝಾಕ್ ಹಾಜಿ ತೆಕ್ಕಿಲ್ ,ಕೆ ಎಂ ಮೂಸಾ ಅರಂತೋಡು, ಸಂಪಾಜೆ ಗ್ರಾಪಂ ಸದಸ್ಯರಾದ ಪಿ ಕೆ ಅಬುಸಾಲಿ ಗೂನಡ್ಕ ,ಎಸ್ ಕೆ ಹನೀಫ್ ಕಲ್ಲುಗುಂಡಿ , ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಮಜೀದ್ ಸಣ್ಣಮನೆ, ಮಾಜಿ ಅಧ್ಯಕ್ಷ ಎ ಇ ಹನೀಫ್ ಅರಂತೋಡು , ಅನ್ವರ್ ಪಟೇಲ್ ,ಮನ್ಸೂರ್ ಪಾರಕ್ಕಲ್ ,ಜವಾದ್ ಪಾರಕ್ಕಲ್ ,ಫಸಲ್ ಸಣ್ಣ ಮನೆ ,ಜುಬೈರ್ ಅರಂತೋಡು ,ಅಶ್ರಫ್ ತೆಕ್ಕಿಲ್ ಪೇರಡ್ಕ, ಲತೀಫ್ ತೆಕ್ಕಿಲ್ ಅರಂತೋಡು , ಸುಹೈಲ್ ದರ್ಕಾಸ್ ,ಅಫಾನ್ ತೆಕ್ಕಿಲ್ ಪೇರಡ್ಕ ,ಇಕ್ಬಾಲ್ ಚೇರೂರು ಗೂನಡ್ಕ , ಇರ್ಷಾದ್ ಪೇರಡ್ಕ ,ಇಸಾಕ್ ಎ ಈ ಅರಂತೋಡು, ಹರ್ಷಾದ್ ಗುಂಡಿ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು
ಆಸ್ಕರ್ ಫರ್ನಾಂಡಿಸ್ ರವರ ರಾಜ್ಯಸಭಾ ನಿಧಿಯಿಂದ ಸಂಪಾಜೆ ಗ್ರಾಮ ಪಂಚಾಯತಿನ ರಸ್ತೆಗೆ 5ಲಕ್ಷ ರೂ ಹಾಗೂ ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ ಶಾದಿಮಹಲ್ ಕಟ್ಟಡಕ್ಕೆ 10ಲಕ್ಷ ರೂ ಅಲ್ಲದೆ ಸುಳ್ಯ ತಾಲ್ಲೂಕಿನ ವಿವಿಧ ಪ್ರದೇಶದ ಅಭಿವದ್ಧಿಗೆ ಟಿ ಎಂ ಶಹೀದ್ ತೆಕ್ಕಿಲ್ ರವರ ಶಿಫಾರಸಿನ ಮೇರೆಗೆ ಸುಮಾರು 60ಲಕ್ಷ ರೂ ಅನುದಾನವನ್ನು ನೀಡಿರುತ್ತಾರೆ ಎಂದು ಅಶ್ರಫ್ ಗುಂಡಿ ಅವರು ಪ್ರಾಸ್ತಾವಿಕವಾಗಿ ನುಡಿದರು. ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯಕ್ಕಾಗಿ ಟಿ ಎಂ ಶಹೀದ್ ತೆಕ್ಕಿಲ್ ರವರ ಮನವಿ ಮೇರೆಗೆ ಕಲ್ಲುಗುಂಡಿ ಸೈಂಟ್ ಫ್ರಾನ್ಸಿಸ್ ಝೇವಿಯರ್ ಸವೇರಪುರ ಚರ್ಚ್ ನ ಅತಿ ವಂದನೀಯ ಫಾದರ್ ಪೌಲ್ ಕ್ರಾಸ್ತಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಲ್ಲುಗುಂಡಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಗದೀಶ್ ರೈ ರವರ ನೇತೃತ್ವದಲ್ಲಿ ವಿಶೇಷ ಪೂಜೆಗೆ ಟಿ ಎಂ ಶಹೀದ್ ತೆಕ್ಕಿಲ್ ರವರಿಂದ ವ್ಯವಸ್ಥೆ ಮಾಡಲಾಯಿತು.

0d1bddce 68dc 4640 81cc 8a90a97b24b1 300x225 7c58cea8 E03c 46f5 976f C1460fad08b4 300x225

Related Articles