ಟಿ ಎಂ ಶಾಹಿದ್ ತೆಕ್ಕಿಲ್ ರವರ 50 ನೇ ಹುಟ್ಟುಹಬ್ಬ ಪ್ರಯುಕ್ತ ಹಲವರಿಗೆ ಧನ ಸಹಾಯ…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ರವರ ಐವತ್ತನೇ ಹುಟ್ಟುಹಬ್ಬ ಪ್ರಯುಕ್ತ ಜೆಕಿಯಾ ಡಿ ಎ ಗೂನಡ್ಕ ರವರಿಗೆ 1 ಪವನ್ , ಸಕೀನಾ ಅರಂತೋಡು ಅವರಿಗೆ ಅರ್ಧ ಪವನ್, ಜರೀನಾ ಗೂನಡ್ಕ ದರ್ಖಾಸ್ತು ಅವರಿಗೆ ಹತ್ತು ಸಾವಿರ ರೂ , ರಿಜ್ವಾನ್ ದರ್ಕಾಸು ಗೂನಡ್ಕ ರವರ ವೈದ್ಯಕೀಯ ವೆಚ್ಚಕ್ಕೆ 5ಸಾವಿರ ರೂ ,ಸಲೀಮ್ ಗೂನಡ್ಕರವರ ವೈದ್ಯಕೀಯ ವೆಚ್ಚಕ್ಕೆ 5ಸಾವಿರ ರೂ ರಂತೆ ಒಟ್ಟು ಮೊತ್ತ 80 ಸಾವಿರ ರೂಪಾಯಿ ಆರ್ಥಿಕ ಧನ ಸಹಾಯವನ್ನು ನೀಡಲಾಗಿದೆಯೆಂದು ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಅವರು ತಿಳಿಸಿದ್ದಾರೆ.