ಉಡುಪಿ ಚಿಕ್ಕಮಗಳೂರು ಖಾಝಿ ಸುಳ್ಯ ಭೇಟಿ -ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ…
ಮಾದಕ ದ್ರವ್ಯ ಕೆಡುಕುಗಳಿಂದ ದೂರವಿದ್ದು, ಶಿಕ್ಷಣ, ಸಂಸ್ಕಾರದ ದಿಂದ ಬದುಕು ಕಟ್ಟಿಕೊಳ್ಳುವoತೆ ಯುವ ಜನರಿಗೆ ಕರೆ…

ಸುಳ್ಯ: ಮಾಣಿ ದಾರುಲ್ಇರ್ಷಾದ್ ಸಾರಥಿ, ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮುಚ್ಚoಪಾಡಿ ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುಳ್ಯಕ್ಕೆ ಭೇಟಿ ನೀಡಿದರು.
ಮುತಅಲ್ಲಿo ಸಂಗಮ, ಲತೀಫ್ ಹರ್ಲಡ್ಕ ರವರ ಹರ್ಲಡ್ಕವಿಲ್ಲಾ ಉದ್ಘಾಟನೆ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಉದ್ಯಮಿ ಹಾಜಿ ಅಬ್ದುಲ್ ಮಜೀದ್ ಜನತಾ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಅಧ್ಯಕ್ಷ ಅಬ್ದುಲ್ ಮಜೀದ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಖಜಾಂಚಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಉಪಸ್ಥಿತರಿದ್ದರು.