ಗಝಲ್…

ಗಝಲ್…
ಚಿಂತೆ ಮರೆತು ಸೊಗಸಿನಿಂದ
ಹಾರುವಂತೆ ಕರುಣಿಸು
ನೋವ ಮರೆಸಿ ಹಿತವ ಹರಿಸಿ
ಅರಳುವಂತೆ ಕರುಣಿಸು
ನೀಲ ಬಾನಿನಲ್ಲಿ ರಂಗು
ಮನದಿ ಶಾಂತಿ ತುಂಬದೇ
ಕಣ್ಣಿನಲ್ಲಿ ನಿನ್ನ ರೂಪ
ಬೆಳಗುವಂತೆ ಕರಣಿಸು
ತಂಪು ಗಾಳಿ ಮೈಯ ಸೋಕಿ
ಸುಖದ ನೆನಹು ತರುವುದು
ತರುಲತೆಗಳು ಹಗುರವಾಗಿ
ಕುಣಿಯುವಂತೆ ಕರುಣಿಸು
ಕ್ಷಣಕ್ಷಣವೂ ಹೊಸತು ಅಲೆಯು
ಮುಟ್ಟುತಿರಲು ದಡವನು
ಎಲ್ಲ ಮರೆತು ಒಲವ ಸವಿಯ
ನೆನೆಯುವಂತೆ ಕರುಣಿಸು
ವಿಪುಲ ಜಗದಿ ನಗುವ ಹರಡಿ
ಜನರ ಹಿತವ ಕಾಣುವ
ಜೀವಜಾಲ ದುಗುಡವನ್ನು
ಮಣಿಸುವಂತೆ ಕರುಣಿಸು
ರ: ಡಾ. ವೀಣಾ ಎನ್ ಸುಳ್ಯ