ಮತಿಯ ನೀಡು…

ಮತಿಯ ನೀಡು…

ತಾಯೆ ಬೇಡುವೆ ನೀಡು ಸ್ಮರಣೆಯ
ಎಂದು ಮರೆಯದ ಹಾಗೆಯೇ
ನಿನ್ನ ನೆನಪಲಿ ದಿನವ ಕಳೆಯುವ
ಮತಿಯ ನೀಡುತ ಕರುಣಿಸು

ವಿದ್ಯೆ ಬೆಳಗುವ ತಾಯೆ ಶಾರದೆ
ಮನದ ಕತ್ತಲೆ ನೀಗಿಸು
ಶಿವೆಯ ರೂಪವ ತಾಳಿ ನಿಂತಿಹೆ
ಕರುಣಿಸೈ ಮೂಕಾಂಬಿಕೆ

ನಮ್ಮ ಭಯವನು ದೂರಮಾಡುವ
ಧೈರ್ಯದರಿವನು ತೊಡಿಸುತಾ
ಸೋಲು ಗೆಲುವನು ತಾಳ್ವ ಶಕುತಿಯ
ನಮಗೆ ನಿರುತವು ನೀಡುತಾ

ಅಸುರ ಮರ್ದನ ಮಾಡಿದಂತೆಯೆ
ಮನಸಿನರಿಗಳನೋಡಿಸು
ಸತ್ತ್ವ ತುಂಬುತ ಬಾಳ ನಡೆಸುವ
ಒಳಿತ ಹಾದಿಯ ತೋರಿಸು

ರಚನೆ: ಡಾ. ವೀಣಾ ಎನ್ ಸುಳ್ಯ

Related Articles

Back to top button