ಜ್ಞಾನ ವರ್ಷ ಸುರಿಸೆಯಾ…

ಜ್ಞಾನ ವರ್ಷ ಸುರಿಸೆಯಾ…
ಯಾರಮೇಲೆ ಮುನಿಸು ಹೊತ್ತು
ಹೊರಟೆ ಕಾಮರೂಪಿಯೇ
ಗಗನದಲ್ಲಿ ಕದನಕ್ಕೆಂದು
ಹೊರಟೆ ಮೇಘರಾಜನೇ
ಸತ್ಯವನ್ನು ಮರೆತ ಜಗಕೆ
ತಮದ ಹಾದಿ ಹಿಡಿದೆಯಾ
ಸಾಮ ದಾನ ಭೇದ ಸೋತು
ದಂಡ ಸೂಕ್ತವೆಂದೆಯಾ
ಎನಿತು ಭಾರಿ ಸುಳಿವು ಕೊಡಲು
ತಿಳಿದುಕೊಳದ ಮಾನವ
ಮತ್ತೆ ಮತ್ತೆ ತಪ್ಪುಗಳನು
ಎಸೆದು ಗರ್ವ ಹೊಂದುತ
ನಿನ್ನ ರೌದ್ರರೂಪ ನೋಡಿ
ಮನವು ಭಯವ ಹೊಂದಿದೆ
ಕರುಣೆ ತೋರಿ ಕರಗಿ ನೀನು
ಜ್ಞಾನವರ್ಷ ಸುರಿಸೆಯಾ
ರಚನೆ: ಡಾ. ವೀಣಾ ಎನ್ ಸುಳ್ಯ