ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್ ಹಾಗೂ ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫ ರಿಗೆ ಮುಡಿಪು ಮಜ್ಲಿಸ್ ನಲ್ಲಿ ಸನ್ಮಾನ…

ಮಂಗಳೂರು: ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ ಹಾಗೂ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕೆ. ಎಂ. ಮುಸ್ತಫ ಇವರನ್ನು ಜುಲೈ 31ರಂದು ಮುಡಿಪು ಎಜುಪಾರ್ಕ್ ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಅಸ್ಸಯ್ಯದ್ ಅಶ್ರಫ್ ತಂಙಳ್ ಅಸ್ಸಖಾಫ್ ಆದೂರ್ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಉಮ್ಮರ್ ಸಖಾಫಿ,ಕಾರ್ಯದರ್ಶಿ ಎಂ.ಬಿ. ಸಖಾಫಿ,ಟಿ.ಆರ್ ಕನ್ಸ್ಟ್ರಕ್ಷನ್ ಎಂ ಡಿ ಖಾದರ್ ಹಾಜಿ, ಮಜ್ಲಿಸ್ ಪದಾಧಿಕಾರಿ ಸಯ್ಯದ್ ಜಲಾಲ್ ತಂಙಳ್, ಸಯ್ಯದ್ ಶಫೀಕ್ ತಂಙಳ್,ಜಮಾಲುದ್ದೀನ್ ಸಖಾಫಿ ಸಿದ್ದೀಕ್ ಸಖಾಫಿ ಮುಳೂರ್,ಅಡ್ವಕೇಟ್ ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.
