ಮೊಗರ್ಪಣೆ ಎಂಟರ್ಪ್ರೈಸಸ್ ಆಶ್ರಯದಲ್ಲಿ ಜಲಾಲಿಯ ರಾತಿಬ್ ಕಾರ್ಯಕ್ರಮ…

ಸುಳ್ಯ: ಮೊಗರ್ಪಣೆ ಎಂಟರ್ಪ್ರೈಸಸ್ ಇದರ ಆಶ್ರಯದಲ್ಲಿ ನಡೆದ ಜಲಾಲಿಯ ರಾತಿಬ್ ಕಾರ್ಯಕ್ರಮ ಇತ್ತೀಚೆಗೆ ಮೊಗರ್ಪಣೆ ಮುಬಾರಕ್ ಟವರ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮ ಸೆಯ್ಯದ್ ಕೂರ ತಂಙಳ್ ಉದ್ಘಾಟಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಆನೆಕ ಸಾದತುಗಳು ಉಸ್ತಾದ್ ಮತ್ತು ಊರಿನ ಹಾಗೂ ಪರವೂರಿನ ಅನೇಕ ಬಂದು ಮಿತ್ರರು ಭಾಗವಹಿಸಿದರು.

ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಮಂಡಳಿಯ ತುಮಕೂರು ಜಿಲ್ಲಾಧ್ಯಕ್ಷ ರಾದ ಆರಿಫ್ ರಾಜಾ, ಉಪಾಧ್ಯಕ್ಷ ರಾದ ಅಸ್ಲಾಂ, ಕರ್ನಾಟಕ ಮುಸ್ಲಿಂ ಜಮಾತ್ ತುಮಕೂರು ಅಧ್ಯಕ್ಷ ಮುಹಿನ್ ಹಾಗೂ ತುಮಕೂರು ಕೇಂದ್ರ ಮಸೀದಿ ಜುಬೇರ್ ರಾಝ ಅವರನ್ನು ಸುಳ್ಯ ಮಲ್ನಾಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ರಿಯಾಝ್, ಗೌರವ ಅಧ್ಯಕ್ಷ ರಾದ ಹಮೀದ್ ಜನತಾ ಮತ್ತು ಸಿದ್ದಿಕ್ ಕೋಕೋ ಸನ್ಮಾನಿಸಲಾಯಿತು. ಮೊಗರ್ಪಣೆ ಎಂಟರ್ಪ್ರೈಸಸ್ ಮಾಲಿಕರಾದ ಮುಸ್ತಫಾ ಮತ್ತು ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

Related Articles

Back to top button