ಗೂನಡ್ಕದ ಪೇರಡ್ಕ ಮೊಹಿಯುದ್ದಿನ್ ಜುಮ ಮಸ್ಜಿದ್ – ಯಾತ್ರಿ ನಿವಾಸದ ಕಾಮಗಾರಿ ವೀಕ್ಷಣೆ…

ಸುಳ್ಯ: ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಗೂನಡ್ಕದ ಪೇರಡ್ಕ ಮೊಹಿಯುದ್ದಿನ್ ಜುಮ ಮಸ್ಜಿದ್ ಇದಕ್ಕೆ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಿರ್ಮಿಸುತ್ತಿರುವ 60 ಲಕ್ಷ ರೂ ವೆಚ್ಚದ ಯಾತ್ರಿ ನಿವಾಸದ ಕಾಮಗಾರಿಯನ್ನು ಪೇರಡ್ಕ ಗೂನಡ್ಕ ಮಸೀದಿಯ ಅಧ್ಯಕ್ಷರು, ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷ, ಕೆಪಿಸಿಸಿ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಎಂ ಆರ್ ಡಿ ಎ ಪೇರಡ್ಕ ಇದರ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಇಬ್ರಾಹಿಂ ಹಾಜಿ ಕರಾವಳಿ, ರಹೀಮ್ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.