ಗಲ್ಫ್ ಬಾಯ್ಸ್ ಹಳೆಗೇಟು ಆಶ್ರಯ ದಲ್ಲಿ ಕ್ರಿಕೆಟ್ ಪಂದ್ಯಾಟ, ಸನ್ಮಾನ ಕಾರ್ಯಕ್ರಮ…
ಕ್ರೀಡೆಯೊಂದಿಗೆ ಸಾಧಕರಿಗೆ ಸನ್ಮಾನ ಮಾದರಿ ಕಾರ್ಯ: ಕೆ. ಎಂ. ಮುಸ್ತಫ...
ಸುಳ್ಯ: ಗಲ್ಫ್ ಬಾಯ್ಸ್ ಹಳೆಗೇಟು ಇದರ ಆಶ್ರಯದಲ್ಲಿ ದಿವಂಗತ ಸತ್ಯ ನಾರಾಯಣ. ಕೆ. ಇವರ ಸ್ಮರಣಾರ್ಥ ಪ್ರಥಮ ದರ್ಜೆ ಕಾಲೇಜು, ಕೊಡಿಯಾಲ ಬೈಲು ಕ್ರೀಡಾoಗಣ ದಲ್ಲಿ 6 ನೇ ವರ್ಷದ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭ ದಲ್ಲಿ ಜಯನಗರದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಗಿ ಆಯ್ಕೆಯಾದ ಪತ್ರಕರ್ತೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶಿಕ್ಷಣ ಕ್ಷೇತ್ರದಲ್ಲಿ ಪಿ ಯು ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕು! ನವಮಿ ಜಯನಗರ, ಪತ್ರಕರ್ತ ಹಸೈನಾರ್ ಜಯನಗರ ಇವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿದರು ಅವರು ಮಾತನಾಡಿ ಯುವಕರು ಕ್ರೀಡೆಯಲ್ಲಿ ಮಗ್ನರಾದಾಗ ಬೇರೆ ವಿಷಯ ಗಳಿಗೆ ಗಮನವಿರುವುದಿಲ್ಲ ಆದರೆ ಗಲ್ಫ್ ಬಾಯ್ಸ್ ಹಳೆಗೇಟು ಇದರ ಸದಸ್ಯರು ಸಮಾಜ ಮುಖಿ ಕೆಲಸದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು, ತನ್ನ ಊರಿನ ಅಗಲಿದವರ ಸ್ಮರಣೆ, ಪ್ರಸ್ತುತ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಬಹಳ ಉತ್ತಮ ಕಾರ್ಯ ಎಂದರು.
ಅಧ್ಯಕ್ಷತೆ ಯನ್ನು ಗಲ್ಫ್ ಬಾಯ್ಸ್ ಹಳೆಗೇಟು ಇದರ ಅಧ್ಯಕ್ಷ ರಶೀದ್ ಕೆವಿಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊರಂಬಡ್ಕ ಆದಿ ಮೊಗೇರ್ಕಳ ಸಮಿತಿ ಕಾರ್ಯದರ್ಶಿ ಸುಂದರ್, ರಾಜ್ ಮುಖೇಶ್ ಐಡಿಯಲ್ ಹಳೆಗೇಟು ಮೊದಲಾದವರು ಉಪಸ್ಥಿತರಿದ್ದರು.




