ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲೆಯ ಉದ್ಯೋಗ ಅವಕಾಶ…
ಮಂಗಳೂರು:ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ 2020-21 ರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸುಮಾರು 60 ಕಂಪೆನಿಗಳು ಕ್ಯಾಂಪಸ್ ಭೇಟಿ ನೀಡಿದ್ದು, ಸಹ್ಯಾದ್ರಿ ಕಾಲೇಜಿನ 474 ವಿಧ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮಾಹಿತಿ ವಿಜ್ಞಾನ ವಿಭಾಗದ ವಿಧ್ಯಾರ್ಥಿ ಮಿ. ಸಮೃದ್ದ್ ಆಚಾರ್ಯ, ಕೊಹೆಸಿಟಿ ಅನ್ನುವ ಕಂಪೆನಿಗೆ ವರ್ಷವೊಂದಕ್ಕೆ 24.5 ಲಕ್ಷ ರೂಪಾಯಿ ಪ್ಯಾಕೇಜಿನಲ್ಲಿ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೆ, ಹೆಚ್ಚುವರಿ ಪೂರ್ವ ಐಪಿಒ ಕ್ಕಾಗಿ ಮುಂದಿನ ಮೂರು ವರ್ಷದವರೆಗೆ 10.50 ಲಕ್ಷ ದಂತೆ 31.5 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಜೊತೆಗೆ ಫೆಬ್ರವರಿ 2021 ರಿಂದ ತಿಂಗಳಿಗೆ 60,000/- ರೂಪಾಯಿ ಸ್ಟೈಫಂಡ್ ಅನ್ನು ತನ್ನ ಇಂಟರ್ನ್ ಶಿಪ್ ಗಾಗಿ ಪಡೆಯಲಿದ್ದಾರೆ.
ಸಹ್ಯಾದ್ರಿ ಕಾಲೇಜಿನಲ್ಲಿ ಕಳೆದ 2020ರ ಆಗಸ್ಟ್ ತಿಂಗಳಿನಿಂದ ಕಂಪೆನಿಗಳು ಕ್ಯಾಂಪಸ್ ನೇಮಕಾತಿಗಾಗಿ ಆಗಮಿಸುತಲಿದ್ದು, ಹಲವಾರು ಕಂಪೆನಿಗಳು ಅನೇಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುತ್ತಾರೆ.
ಕ್ಯಾಪ್ಜೆಮಿನಿ ಕಂಪೆನಿಯು 88 ವಿಧ್ಯಾರ್ಥಿಗಳನ್ನು, 77 ವಿಧ್ಯಾರ್ಥಿಗಳು ಕಾಗ್ನಿಝೆಂಟ್ ಕಂಪೆನಿಗೆ (46 ವಿಧ್ಯಾರ್ಥಿಗಳು ಇಂಟರ್ನ್ಶಿಪ್ ಗಾಗಿ) ಹಾಗೂ ಟಿಸಿಎಸ್ ಕಂಪೆನಿಗೆ 50 ವಿಧ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಂತೆಯೇ ಇನ್ಫೋಸಿಸ್ ಕಂಪೆನಿಗೆ 101 ವಿಧ್ಯಾರ್ಥಿಗಳು ಶಾರ್ಟ್ ಲಿಸ್ಟ್ ಆಗಿದ್ದಾರೆ ಹಾಗೂ ಇಂಟರ್ನ್ಶಿಪ್ ಅವಕಾಶವನ್ನು ಕೂಡಾ ಪಡೆದಿರುತ್ತಾರೆ.
ಶೈಕ್ಷಣಿಕ ವರ್ಷ 2020ರಲ್ಲಿ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿನಿ ನವ್ಯ ಬಿ.ಎಲ್. ಅವರು ಆ್ಯಡೋಬ್ ಕಂಪೆನಿಗೆ ವರ್ಷವೊಂದಕ್ಕೆ 43 ಲಕ್ಷ ರೂಪಾಯಿಯ ಹುದ್ದೆಯ ಫೈನಲಿಸ್ಟ್ ಆಗಿದ್ದಾರೆ ಮತ್ತು ಬಿ. ರಚಿತ ಅವರಿಗೆ ವರ್ಷವೊಂದಕ್ಕೆ 27.7 ಲಕ್ಷ ರೂಪಾಯಿಯಂತೆ ಹಾಗೂ ಮೇಘಾ ಭಟ್ ಅವರು ವರ್ಷವೊಂದಕ್ಕೆ 22 ಲಕ್ಷ ರೂಪಾಯಿಯಂತೆ ಅದೇ ಕಂಪೆನಿಗೆ ಆಯ್ಕೆಯಾಗಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಸ್ಟಾರ್ಟ್-ಅಪ್ ಕಂಪೆನಿಗಳು ವಿಧ್ಯಾರ್ಥಿಗಳಿಗೆ ಒದಗಿಸಿದ ಇಂಡಸ್ಟ್ರೀ ಕನೆಕ್ಟ್ ನಂತಹ ಕಾರ್ಯಕ್ರಮಗಳು ಮತ್ತು ತರಬೇತಿಗಳಿಂದಾಗಿ ಒಳ್ಳೊಳ್ಳೆಯ ಉತ್ಪಾದಕ ಕಂಪೆನಿಗಳನ್ನು ಆಕರ್ಷಿಸಲು ಸಹ್ಯಾದ್ರಿ ಕಾಲೇಜಿಗೆ ಸಾಧ್ಯವಾಯಿತು. ಬೃಹತ್ ಮೂಲ ಸೌಕರ್ಯವನ್ನು ಹೊಂದಿರುವ ಸಹ್ಯಾದ್ರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮೊದಲ ವರ್ಷದಿಂದ ಕೊನೆಯ ವರ್ಷದವರೆಗಿನ ಎಲ್ಲಾ ವಿಧ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಮತ್ತು ಕೈಗಾರಿಕತೆಗೆ ಮುಖಾಮುಖಿಯಾಗುವ ಅವಕಾಶಯನ್ನು ಒದಗಿಸಲಾಗುತ್ತದೆ. ಆದುದರಿಂದಲೇ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಗಳಿಗೆ ಒಳ್ಳೆಯ ಕಂಪೆನಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ.
‘ಕೋವಿಡ್ – 19 ಪಿಡುಗಿನ ಸಂದರ್ಭವಿದ್ದಾಗಲೂ ನಿರಂತರವಾಗಿ ಆನ್ ಲೈನ್ ಮತ್ತು ಆಫ್ ಲೈನ್ ನೇಮಕಾತಿಗಳನ್ನೂ ಕಾಲೇಜಿನಲ್ಲಿ ನಡೆಸಲಾಗಿದೆ. ಕಳೆದ ವರ್ಷಗಳಂತೆಯೇ, ಪ್ರಸ್ತುತ ವರ್ಷವೂ ಕಂಪೆನಿಗಳು ನೇಮಕಾತಿಗಾಗಿ ಕಾಲೇಜಿಗೆ ಆಗಮಿಸಿದ್ದುವು’ ಎಂಬುದಾಗಿ ಪ್ಲೇಸ್ ಮೆಂಟ್ ವಿಭಾಗದ ಡೀನ್ ರಶ್ಮಿ ಭಂಡಾರಿ ಅವರು ಹೇಳಿದ್ದಾರೆ.
ಸಹ್ಯಾದ್ರಿ ಕಾಲೇಜು ಇಂಡಸ್ಟ್ರಿ ಹಬ್ ನಲ್ಲಿ ಬಹಳ ಮುತುವರ್ಜಿಯನ್ನು ಹೊಂದಿದ್ದು, ಭವಿಷ್ಯದ ಯುವ ಉತ್ಸಾಹಿ ತಂತ್ರಜ್ಞಾನ ಆಸಕ್ತರಿಗೆ ವೃತ್ತಿ ಜೀವನವನ್ನು ನಿರ್ಮಿಸಿ ಕೊಡುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ.