ಸಂಕಷ್ಟಕ್ಕೀಡಾದ ಪ್ರವಾಸಿಗರ ನೆರವಿಗೆ ಧಾವಿಸಿದ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ…

ಒಮಾನ್: ಮಂಗಳೂರಿನ ಇಬ್ಬರು ಹಾಗೂ ಜಾರ್ಕಂಡ್ ನ ಒಬ್ಬ ಸಹೋದರರು ಕೆಲಸದ ನಿಮಿತ್ತ ಒಮಾನಿಗೆ ತಲುಪಿ ನಂತರ ಇಬ್ಬರು ಕನ್ಸ್ಟ್ರಕ್ಷನ್ ಕೆಲಸದಲ್ಲಿ ಸೇರಿದಾಗ ಸರಿಯಾದ ಸಂಬಳ ಸಿಗದೆ ತಮ್ಮ ದೈನಂದಿನ ಖರ್ಚಿಗೂ ಕಷ್ಟದಲ್ಲಿ ಇರುವಾಗ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ನ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ, ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್, ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ ಇವರನ್ನು ಸಂಪರ್ಕಿಸಿ ಇವರ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವರ್ತರಾದ ಕೆಸಿಎಫ್ ಒಮಾನ್ ಸಾಂತ್ವಾನ ವಿಭಾಗದ ಅಧ್ಯಕ್ಷರಾದ ಕಲಂದರ್ ಬಾಷಾ ತೀರ್ಥಹಳ್ಳಿ, ಕೆಸಿಎಫ್ ನಿಝ್ವಾ ಝೋನ್ ಅಧ್ಯಕ್ಷರಾದ ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ, ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಜಾಲ್ಸೂರ್,ಕೋಶಾಧಿಕಾರಿ ಸಿರಾಜ್ ಅರಿಮಳ , ಇಬ್ರಾಹಿಮ್ ಮಣಿಪುರ ರವರು ಜೊತೆಗೂಡಿ ಅವರು ನಿಝ್ವಾ ದಲ್ಲಿ ಇರುವುದನ್ನು ಖಾತರಿ ಪಡಿಸಿ ಅವರನ್ನು ಸಂಪರ್ಕಿಸಿ ಅವರಿಗೆ ದೈನಂದಿನ ಖರ್ಚಿನ ವ್ಯವಸ್ಥೆ ಯನ್ನು ಮಾಡಿ ಅವರ ವಿವರವನ್ನು ಪಡೆದು ಸ್ಪೋನ್ಸರ್ ರನ್ನು ಭೇಟಿಯಾಗಿ ಕೆಲಸದ ವಿಷಯ ಹಾಗೂ ಸಂಬಳದ ವಿಷಯ ಗೊಂದಲ ಬಗೆಹರಿಸಲು ಪ್ರಯತ್ನಿಸಿ ವಿಫಲರಾದಾಗ ಅವರನ್ನು ಊರಿಗೆ ಕಳುಹಿಸುವ ಬಗ್ಗೆ ಸ್ಪೋನ್ಸರ್ ಅವರನ್ನು ಕೇಳಿ ಕೊಂಡಾಗ ಅವರು ವಿಸಾ ಕ್ಕೆ ತಗುಲಿದ ಖರ್ಚುಗಳನ್ನು ಹಿಂದಿರುಗಿಸುವಂತೆ ಬೇಡಿಕೆ ಇಟ್ಟರು. ನಂತರ ಈ ವಿಷಯವನ್ನು ಮುಂದಿಟ್ಟು ಕೆಸಿಎಫ್ ಒಮಾನ್ ನಾಯಕರ ಮತ್ತು ಕೆಲವು ಹಿತೈಷಿಗಳ ಹಾಗೂ ಇಬ್ಬರು ಸಹೋದರರ ಮುಖಾಂತರ ಮೊತ್ತವನ್ನು ಸಂಗ್ರಹಿಸಿ ಇನ್ನು ಬಾಕಿ ಬಂದ ಮೊತ್ತವನ್ನು ಕೆಸಿಎಫ್ ನ ನಾಯಕರು ನೀಡಿ ಒಟ್ಟಾರೆ ಮೊತ್ತವನ್ನು ಸ್ಪೋನ್ಸರ್ ರವರಿಗೆ ನೀಡಲಾಯಿತು. ನಂತರ ಅವರನ್ನು ದಿನಾಂಕ 11/8/2022 ಗುರುವಾರ ಅವರನ್ನು ಝೋನ್ ಅಧ್ಯಕ್ಷರು ಏರ್ಪೋರ್ಟ್ ಗೆ ತಲುಪಿಸಿ ಊರಿಗೆ ಕಳುಹಿಸಿ ಕೊಡಲಾಯಿತು. ಇನ್ನೊಬ್ಬ ಕೆಲಸದ ನಿಮಿತ್ತ ಆದಮ್ ಎಂಬಲ್ಲಿ 1 ತಿಂಗಳ ಹಿಂದೆ ಯಷ್ಟೇ ತಲುಪಿದ್ದು ಅವರ ವೀಸಾದ ತಾಂತ್ರಿಕ ಕಾರಣ ಕಂಪನಿ ಕ್ಯಾನ್ಸಲ್ ನಲ್ಲಿ ಕಳುಹಿಸುವಾಗ ಅದಕ್ಕೆ ಬೇಕಾದ ದಾಖಲೆಗಳನ್ನು ಕೆಸಿಎಫ್ ನಿಝ್ವ ಝೋನ್ ಅಧ್ಯಕ್ಷರಾದ ಮೊಹಮ್ಮದ್ ಹುಸೈನ್ ತೀರ್ಥ ಹಳ್ಳಿ ಹಾಗೂ ನಿಝ್ವಾ ಝೋನ್ ಸಾಂತ್ವಾನ ಕಾರ್ಯದರ್ಶಿ ಅಷ್ಫಾಕ್ ಅರಿಮಳ ರವರು ಸಂಗ್ರಹಿಸಿ ಏರ್ಪೋರ್ಟ್ ಗೆ ತಲುಪಿಸಿ ಊರಿಗೆ ಕಳುಹಿಸಿ ಕೊಡಲಾಯಿತು. ಈ ಸೇವೆಯಲ್ಲಿ ಭಾಗಿಯಾದ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗ ಮತ್ತು ಕೆಸಿಎಫ್ ನಿಝ್ವ ಝೋನ್ ಸಮಿತಿ ಗೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಅಭಿನಂದನೆ ಸಲ್ಲಿಸಿದೆ.