ಸುದ್ದಿ

ಮೂಡುಬಿದಿರೆ- ಸರಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ…

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ಸರಕಾರಿ ಆಸ್ಪತ್ರೆ ಮೂಡುಬಿದಿರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಮಗುವಿಗೆ ಪೋಲಿಯೋ ಡ್ರಾಪ್ಸ್ ಹಾಕುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಜೆ ಡಬ್ಲ್ಯೂ ಪಿಂಟೋ,ಆರೋಗ್ಯ ರಕ್ಷಣಾ ಸಮಿತಿ ಸದಸ್ಯರಾದ ಬಾಹುಬಲಿ ಪ್ರಸಾದ್,ಕೆ ಆರ್ ಪಂಡಿತ್,ರೋಟರಿ ಕ್ಲಬ್ ಪದಾಧಿಕಾರಿಗಳಾದ ಡಾ.ಮುರಳಿಕೃಷ್ಣ, ಡಾ.ವಸಂತ್, ಡಾ.ರಮೇಶ್, ಮಕ್ಬುಲ್, ಸಿ ಎಚ್ ಗಪೂರ್,ಸುರೇಶ್ ಜೈನ್, ಡಾ.ಸುಜಯ್ ಭಂಡಾರಿ, ಡಾ.ಶಶಿಕಲಾ, ಶ್ರೀಮತಿ ಸುಶೀಲಾ, ಶ್ರೀಮತಿ ಶಾಂತಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advertisement

Related Articles

Back to top button