ನೌಶಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಮತ್ತು ಏಕದಿನ ಮತ ಪ್ರಭಾಷಣ- ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ರೂ.10 ಸಾವಿರ ಸಹಾಯಧನ…

ಸುಳ್ಯ: ಲಿಯಾವುಲ್ ಇಸ್ಲಾಂ ಯುತ್ ಫೆಡರೇಶನ್ ಮಂಡೆಕೋಲು ಇದರ ವತಿಯಿಂದ ನಡೆಯುವ ಅಗಲಿದ ನೌಶಾದ್ ಹಾಜಿ ಸೂರಲ್ಪಾಡಿಯವರ ಅನುಸ್ಮರಣೆ ಹಾಗೂ ಬಹು| ಹಾಫಿಲ್ ಸಿರಾಜುದ್ಧೀನ್ ಖಾಸಿಂರವರ ಏಕದಿನ ಮತ ಪ್ರಭಾಷಣ ಕಾರ್ಯಕ್ರಮಕ್ಕೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನದ ವತಿಯಿಂದ ರೂ. 10 ಸಾವಿರ ಸಹಾಯಧನವನ್ನು ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಯವರು ಮಂಡೆಕೋಲು ಜುಮಾ ಮಸೀದಿಯ ಅಧ್ಯಕ್ಷರಾದ ನಝೀರ್ ಶಾಲೆಕ್ಕಾರ್ ರವರಿಗೆ ಅರಂತೋಡು ಕಚೇರಿಯಲ್ಲಿ ಹಸ್ತಾಂತರಿಸಿದರು
ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಅಡ್ಕಾರ್ ಯೂಸುಪ್ ಮಂಡೆಕೋಲು ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.